This is the title of the web page
This is the title of the web page
Crime NewsLocal News

ಅನಾಮಧೇಯ ಹೆಣ್ಣು ಮಗುವಿನ ಶವ ಪತ್ತೆ : ಕೊಲೆ ಶಂಕೆ…?


K2kannadanews.in

ಸಿಂಧನೂರು : ಅನುಮಾನಾಸ್ಪದ ರೀತಿಯಲ್ಲಿ ಅನಾಮಧೇಯ (Unknown) ಹೆಣ್ಣು ಮಗುವಿನ (baby girl body) ಶವ ನಗರದ ಸತ್ಯ ಗಾರ್ಡನ್ (Sthya gardan) ಬಳಿ ಪತ್ತೆಯಾಗಿದ್ದು, ಪೋಲಿಸ್ (Police) ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಹೊರವಲಯದಲ್ಲಿ ಘಟನೆ ನಡೆದಿದೆ. ಹೆಣ್ಣು ಮಗುವೊಂದನ್ನು ಕೊಲೆ (Murder) ಮಾಡಿ ಎಸೆದಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಮಗು ಮೃತಪಟ್ಟು ನಾಲ್ಕೈದು ದಿನ (baby dies 4 Days bac ಆಗಿರಬಹುದು ಎಂದು ಹೇಳಲಾಗುತ್ತಿದೆ. ಸಾರ್ವಜನಿಕರು ಮಾಹಿತಿ ಮೇರೆಗೆ ಸ್ಥಳಕ್ಕೆ ಡಿವೈಎಸ್ಪಿ (DYSP) ಬಿ.ಎಸ್.ತಳವಾರ ಹಾಗೂ ಪಿಐ (PI) ದುರಗಪ್ಪ ಬೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ಮೃತ ಶವವನ್ನು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ (RIMS Hospital) ಕಳಿಸಿಕೊಡಲಾಗಿದೆ. ಅಂದಾಜು ಏಳರಿಂದ ಎಂಟು ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಕೊಲೆ ಆಗಿರಬಹುದು ಎಂದು ಶಂಕಿಸಲಾಗುತ್ತಿದ್ದು ಕಾರಣ ತಿಳಿದುಬಂದಿಲ್ಲ. ಅಲ್ಲದೇ ಅನಾಮಧೇಯ ಹೆಸರು ವಿಳಾಸ ಯಾವುದೇ ಮಾಹಿತಿ ತಿಳಿದುಬಂದಿಲ್ಲ.


[ays_poll id=3]