
ಲಿಂಗಸುಗೂರು: ಅರಣ್ಯೀಕರಣ ಮಾಡಲು ಬೀಜದುಂಡೆಗಳನ್ನು ಎಸೆದರೆ ಸಮೃದ್ಧ ಪರಿಸರ ಬೆಳೆಸಲು ಸಹಕಾರಿ ಆಗಲಿದೆ. ಅರಣ್ಯ ಪ್ರದೇಶಗಳಲ್ಲಿ ಸಸಿಗಳು ನಾಟಲು ಬೀಜದುಂಡೆ ಪದ್ಧತಿ ಹೆಚ್ಚು ಪ್ರಯೋಜಕವಾಗಿದೆ ಎಂದು ಶಿಕ್ಷಕ ನಾಗರಾಜ ಮಾಂಡ್ರೆ ಹೇಳಿದರು.
ರಾಂಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ರಹಿತ ಶಾಲಾ ಅವಧಿಯಲ್ಲಿ ಬೀಜದುಂಡೆ ತಯಾರಿಕೆ ಚಟುವಟಿಕೆ ಕುರಿತು ಮಾತನಾಡಿದ ಅವರು, ಸಸಿ ನೆಡುವ ಪದ್ಧತಿ ಬದಲು ಮಣ್ಣು, ಸಗಣಿ, ಪೋಷಕಾಂಶ ಮಿಶ್ರಣ ಮಾಡಿ ಅದರಲ್ಲಿ ಬೀಜ ಹಾಕಿ ಉಂಡೆ ತಯಾರಿಸಬೇಕು. ಅರಣ್ಯೀಕರಣ ಮಾಡಲು ಬೀಜದುಂಡೆಗಳನ್ನು ಎಸೆದರೆ ಸಮೃದ್ಧ ಪರಿಸರ ಬೆಳೆಸಲು ಸಹಕಾರಿ ಆಗಲಿದೆ ಎಂದರು.
ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತೆ ಮಾಡಿಕೊಂಡು ತೋಟಗಾರಿಕೆ ಬೀಜಗಳನ್ನು ಉಂಡೆಯಲ್ಲಿ ಹಾಕಿ ಶಾಲಾ ಆವರಣದ ಆಯಕಟ್ಟಿನ ಸ್ಥಳಗಳಲ್ಲಿ ಎಸೆದರು. ಇನ್ನೂ ಕೆಲ ಅರಣ್ಯೀಕರಣ ಬೀಜಗಳನ್ನು ಪಕ್ಕದ ರಸ್ತೆ, ಜಮೀನುಗಳ ಬದುಗಳಲ್ಲಿ ಹಾಕುವ ಮೂಲಕ ವಿಶೇಷ ಕಾರ್ಯ ಚಟುವಟಿಕೆ ನಡೆಸಿಕೊಟ್ಟರು.
![]() |
![]() |
![]() |
![]() |
![]() |
[ays_poll id=3]