This is the title of the web page
This is the title of the web page
Crime NewsLocal News

ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

ರಾಯಚೂರು: ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥವಾಗಿ ಮೂರು ತಿಂಗಳಲ್ಲಿ ಮದುವೆ ಇದ್ದ ಯುವತಿಯನ್ನು ಅನ್ಯಕೋಮಿನ ವ್ಯಕ್ತಿ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ ಪೋಷಕರು. ಹೌದು ರಾಯಚೂರಿನಲ್ಲಿ ಕೆಲವೇ ದಿನಗಳ ಹಿಂದೆ ಹಿಂದು ಶಿಕ್ಷಕಿಯೊಬ್ಬಳು ತಮ್ಮ 7 ವರ್ಷದ ಮಗುವನ್ನೂ ಬಿಟ್ಟು ಸಲೀಂ ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾಗಿದ್ದಳು. ಇದು ಲವ್ ಜಿಹಾದ್ ಎಂಬ ಆರೋಪವನ್ನು ಆ ಶಿಕ್ಷಕಿಯ ಮನೆಯವರೇ ಮಾಡಿದ್ದರು. ಅದರ ಬೆನ್ನಲ್ಲೇ ರಾಯಚೂರಿನಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದು ಯುವತಿ ಭಾರತಿ ಎಂಬಾಕೆಯನ್ನು ಮುಸ್ಲಿಂ ಯುವಕ ರೆಹಾನ್ ಎಂಬಾತ ಲವ್ ಜಿಹಾದ್ ಬಲೆಗೆ ಬೀಳಿಸಿದ್ದಾನೆ ಎಂಬ ಆರೋಪವನ್ನು ಭಾರತಿ ಪಾಲಕರು ಮಾಡಿದ್ದಾರೆ. ಈ ರೆಹಾನ್ ನಗರದಲ್ಲಿ ಪ್ಲವರ್ ಶೋ ವ್ಯಾಪಾರಿಯಾಗಿದ್ದ. ಆತ ಕೆಲಸ ಮಾಡುವ...
Local News

NPS ರದ್ದತಿಗಾಗಿ ಬೆಳಗಾವಿ ಅಧಿವೇಷನದಲ್ಲಿ ಸರಕಾರದ ಮೇಲೆ ಒತ್ತಡ ಹಾಕುವೆ

ರಾಯಚೂರು : ಎನ್ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಗೆ ತರುವಂತೆ ಬೆಳಗಾವಿ ಅಧಿವೇಶನದಲ್ಲಿ ನೌಕರರ ಧ್ವನಿಯಾಗಿ ಸರಕಾರದ ಮೇಲೆ ಒತ್ತಡ ಹೇರುವಂತೆ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಘಟಕ ರಾಯಚೂರು ವತಿಯಿಂದ ಮನವಿ ಸಲ್ಲಿಸಿದರು. ಎನ್ಪಿಎಸ್ ಯೋಜನೆ ಜಾರಿ ಯಾದಗಿನಿಂದ ನೌಕರರು ಸಾಕಷ್ಟು ಸಮಸ್ಯೆಗೆ ಈ ಹಿನ್ನೆಲೆಯಲ್ಲಿ ನೌಕರರ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ನಗರ ಶಾಸಕರಾದ ಡಾ ಶಿವರಾಜ ಪಾಟೀಲ ರವರು ಈಗಾಗಲೇ ಈ ವಿಚಾರ ನನ್ನ ಗಮನದಲ್ಲಿದೆ, ಅಲ್ಲದೇ ಮುಪ್ಪಿನ ಭದ್ರತೆ ನೌಕರರರಲ್ಲಿ ಕಾಡುತ್ತಿದೆ ನಿಶ್ಚಿತ ಪಿಂಚಣಿ ನೌಕರರ ಬಾಳಿಗೆ ಆಶಾಕಿರಣ, ಸರಕಾರಿ ನೌಕರರಿಗೆ ಬರುವವರು ಪಿಂಚಣಿ ಇದೆ ಎಂಬ ಕಾರಣಕ್ಕೆ ಬರುತ್ತಾರೆ. ಇತ್ತೀಚಿನ ಬದಲಾವಣೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ...
Education News

ಉತ್ತಮ ಶಿಕ್ಷಣ ಮತ್ತು ಸಾಮರ್ಥ್ಯ ಹೆಚ್ಚಿಸಲು ಹೀಗೆ ಕಲಿಯಿರಿ

K2 ನ್ಯೂಸ್ ಡೆಸ್ಕ್ : ಶಿಕ್ಷಣ ಮತ್ತು ಕಲಿಕೆಯಲ್ಲಿ ಸಾಕಷ್ಟು ಹಂತಗಳಿವೆ, ಕಲಿಕೆ ಎಂದರೆ ಶಾಲಾ ಕಾಲೇಜುಗಳಿಗೆ ಹೋಗಿ ಮಾತ್ರ ಕಲಿಯುವುದು ಅಲ್ಲ ಅದರ ಹೊರತಾಗಿಯೂ ಪ್ರಾಯೋಗಿಕ ಕಲಿಕೆ ಇದೆ ಅದನ್ನು ಅನೌಪಚಾರಿಕ ಕಲಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಮತ್ತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚಿತ್ರಗಳು, ಬಣ್ಣಗಳು, ಗ್ರಾಫ್‌ಗಳು ಮತ್ತು ಇತರ ಆರಾಮದಾಯಕ ಕಲಿಕೆಯಿಂದ ಇದು ಸೂಕ್ತವಾಗಿರುತ್ತದೆ. ಸುತ್ತ ಮುತ್ತಲಿನ ಸಣ್ಣ ಬದಲಾವಣೆಯನ್ನೂ ಕೂಡ ನೀವು ಇದರಲ್ಲಿ ಗಮನಿಸಬಹುದು. ಶ್ರವಣ ಮಾಧ್ಯಮ: ಈ ಕಲಿಯುವವರು ಧ್ವನಿ ಅಥವಾ ಮಾತಿನ ಮೂಲಕ ಮಾಹಿತಿಯನ್ನು ಪ್ರಸರಣ ಮಾಡುತ್ತದೆ. ಸಂಗೀತ, ಪ್ರಾಸಗಳು ಮತ್ತು ಲಯಬದ್ಧವಾಗಿ ಕಲಿಕಾ ವಿಷಯವನ್ನು ಗ್ರಹಿಸಬಹುದು. ಇದು ಓದುವುದಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿಯುವ ಸಂಗತಿಯಾಗಿದೆ. ಮೌಖಿಕ ಅಥವಾ ಭಾಷಾ ಕಲಿಕೆ ಓದುವುದಕ್ಕಿಂತ ಹೆಚ್ಚಿನದಾಗಿ ಇನ್ನೊಬ್ಬರೊಟ್ಟಿಗೆ ಚರ್ಚೆ ಮಾಡುವುದು ಮತ್ತು ಸಂವಹನ ನಡೆಸುವುದರ ಮೂಲಕ ಹೆಚ್ಚು...
Crime News

ಜಿಂಕೆ ಹಾಗೂ ನವಿಲು ಮಾಂಸ ಮಾರಾಟ ಗ್ಯಾಂಗ್ ಅಂದರ್

K2 ಕ್ರೈಂ ನ್ಯೂಸ್ : ಕಲಬುರಗಿ ಯದುಲ್ಲಾ ಕಾಲೋನಿ ನಜಮೋದ್ದೀನ್‌ ಎಂಬುವವರ ಮನೆಯಲ್ಲಿ ಅಳಿವಿನ ಅಂಚಲ್ಲಿರುವ ಜಿಂಕೆ ಹಾಗೂ ನವಿಲು ಮಾಂಸ ಮಾರಾಟ ಮಾಡುತ್ತಿರುವ ಪ್ರಕರಣ ರೋಜಾ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಟರಣೆಯಲ್ಲಿ ಜಿಂಕೆ, ನವಿಲು ಬೇಟೆಗೆ ಬಳಸುತ್ತಿದ್ದ 0.22 ರೈಫಲ್‌, ಅದಕ್ಕೆ ಸಂಬಂಧಪಟ್ಟಂತಹ 113 ನಾಡತೂಸ್‌, 0. 117 ಏರ್‌ಗನ್‌, ತುಂಡರಿಸಲ್ಪಂಟ್ಟತಂಹ ನಾಲ್ಕಕ್ಕಿಂತ ಹೆಚ್ಚು ಜಿಂಕೆ, ಜಿಂಕೆ ಮರಿಗಳ ಮಾಂಸದ ರಾಶಿ, ಮಾಂಸ ಕಡಿಯಲು ಬಳಸುತ್ತಿದ್ದ ಬತಾಯಿ, ಚಾಕು ಸಾಮಗ್ರಿ, 2 ಜೊತೆ ಗಮ್‌ ಬೂಟ್‌, 2 ಮೊಬೈಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಐಡಿ ಅರಣ್ಯ ಘಟಕದ ಪಿಎಸ್‌ಐ ಜ್ಯೋತಿ ಜಪ್ತಿ ಮಾಡಿ ಆರೋಪಿಗಳಾದ ಸೈಯ್ಯದ್‌ ನಜಮೋದ್ದೀನ್‌, ಮೊಹ್ಮದ್‌ ಅಲ್ತಾಫ್‌, ಸಮೀ ಜುನೈದಿ ವಿರುದ್ಧ ರಾಷ್ಟ್ರೀಯ ವನ್ಯ ಜೀವಿಗಳ ಕಾಯ್ದೆ ಮತ್ತು ಆಯುಧ ನಿಯಮಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ....
State News

ರಾಜ್ಯದ ನೀರಾವರಿ ಯೋಜನೆ, ಜಲಜೀವನ್ ಮಿಷನ್ ಯೋಜನೆಗಳ ಕುರಿತು ಚರ್ಚೆ

K2 ನ್ಯೂಸ್ ಡೆಸ್ಕ್: ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಳ ಕುರಿತು ಚರ್ಚೆ ನಡೆಸಿದರು. ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯ ಬೇಕಾದ ತೀರುವಳಿಗಳನ್ನು ಶೀಘ್ರವೇ ಒದಗಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆ ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಮಾಹಿತಿ ನೀಡಿದರು....
Local News

ಡಿ.2ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಮಾನ್ವಿ : ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ರಥೋತ್ಸವ ಡಿ.2ರಂದು ಅದ್ದೂರಿಯಾಗಿ ಜರುಗಲಿದೆ. ಶ್ರೀ ವೀರಭದ್ರೇಶ್ವರ ಜಾತ್ರೆಯ ಬೆಳ್ಳಿಗೆ 5 ಗಂಟೆಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರನಿಗೆ ಮಹಾರುದ್ರಭಿಷೇಕ ಪೂಜೆ , ಹಾಗೂ ಸಹಸ್ರ ಬಿಲ್ವಾರ್ಚನೆ ,ರುದ್ರಭಿಷೇಕ ಪೂಜೆ , ಮಹಾಮಂಗಳರತಿ ಜರುಗಲಿವೆ. ಬೆಳ್ಳಿಗೆ 9 ಗಂಟೆಗೆ ಗೋಪುರಕ್ಕೆ ಮತ್ತು ರಥೋತ್ಸವಕ್ಕೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ಜರುಗಲಿವೆ. ಸಾಯಂಕಾಲ 3 ಗಂಟೆಗೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ನಂದಿ ದ್ವಜದೂಡನೆ ಕಳಸ ಸಮೂಹದೂಂದಿಗೆ ಹೊರಡಿಸುವುದರ ಮೂಲಕ ಸಾಯಂಕಾಲ 5 ಗಂಟೆಗೆ ವೀರಭದ್ರರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನಂತರ ಸಾಯಂಕಾಲ 7ಗಂಟೆಗೆ ಅಗ್ನಿಕುಂಡ ಪ್ರವೇಶ ಮಹೋತ್ಸವ ಜರುಗಲಿದೆ. ಯಮನೂರು ಗ್ರಾಮದ ಶ್ರೀ ರುದ್ರಮುನಿ‌ಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿ ಇವರಿಂದ ಪುರವಂತಿಕೆ ಮತ್ತು...
Local News

ಫೇ.13 ಸಾಮೂಹಿಕ ವಿವಾಹಗಳಿಗೆ ನೊಂದಾಯಿಸಿ ಕೊಳ್ಳಿ : ಮಂಜುನಾಥ್ ನಾಯಕ

ಮಾನ್ವಿ : ಕವಿ ಹಾಗೂ ಸಾಹಿತಿ ಸುರೇಶ್ ಗೌಡ ಮುಂದಿನ ಮನಿಯವರ 41 ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ವಿರಕ್ತಮಠದಲ್ಲಿ ಫೆ.14 ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ್ ನಾಯಕ ಹೇಳಿದರು. ಅಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕವಿ ಗೋಷ್ಠಿ, ಸಾಹಿತಿಗಳಿಗೆ ಸನ್ಮಾನ, ಪುಸ್ತಕ ಬಿಡುಗಡೆ, ತಾಲೂಕಿನ ಆರ್ಥಿಕವಾಗಿ ದುರ್ಬಲರಾಗಿರುವ ಬಡ ಕುಟುಂಬಗಳ ವಧುವರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೊಜಿಸಲಾಗಿದ್ದು. ಆಸಕ್ತರು ಸುರೇಶ್ ಗೌಡ ಮುಂದಿನ ಮನಿ ದೂ. 8050900133, ಸೈಯದ್ ಆರಿಫ್ 8095385018 ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕು ಎಂದು ತಿಳಿಸಿದರು....
Local News

ಹಣ ದುರ್ಬಳಕೆ, ಉಟಕನೂರು ಗ್ರಾ.ಪಂ ಪಿಡಿಓ ಅಮಾನತು

ಮಾನ್ವಿ : 15 ನೇ ಹಣಕಾಸು ಯೋಜನೆಯ ಅನುದಾನ ಹಣದುರ್ಬಳಕೆ ಮಾಡಿರುವ ಉಟಕನೂರು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಇವರನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೈದ್ರಾಬಾದ್ -ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಂ.ಬಿ.ನಾಯಕ ಮಾನ್ವಿ ತಾಲೂಕಿನ ಉಟ ಕನೂರು ಗ್ರಾಮ ಪಂಚಾಯತಿಯಲ್ಲಿ ಪ್ರಸಕ್ತ ಸಾಲಿನ 15 ಪಂಚವಾರ್ಷಿಕ ಹಣಕಾಸು ಯೋಜನೆಯಲ್ಲಿ ಅಂದಾಜು 40 ಲಕ್ಷ ರೂ.ಹಣ ದುರ್ಬಳಕೆಯಾಗಲು ಗ್ರಾ.ಪಂ ಪಿಡಿಓ ರಾಮಪ್ಪ ನಡಗೇರಿ ಕಾರಣೀಕರ್ತನಾಗಿದ್ದಾನೆ. 15 ನೇ ಹಣಕಾಸು ಯೋಜನೆಗೆ ಸಂಬಂಧಪಟ್ಟಂತೆ ಪಿಡಿಓ ರಾಮಪ್ಪ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷ ರಾಗಿ ಹಾಗೂ ಸದಸ್ಯರು ಯಾವುದೇ ಕ್ರಿಯಾ ಯೋಜನೆ ರೂಪಿಸದೇ ಅಂದಾಜು 40 ಲಕ್ಷ ರೂ.ಹಣ ವಿವಿಧ ಏಜೇನ್ಸಿ ಹಾಗೂ ವೆಂಡರುಗಳ ಹೆಸರಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಮೂಲಕ ಪಡೆದು ಪರಿಶೀಲಿಸಿದಾಗ ಯಾವುದೇ ಕಾಮಗಾರಿ ಮಾಡದೇ ಹಣ ಕ೦ಡುಬಂದಿದೆ....
Local News

ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ

ರಾಯಚೂರು : ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 66ನೇ ಪರಿನಿರ್ವಾಣದ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 6 ರಂದು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಎಂಆರ್ ಭೇರಿ ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ದಲಿತರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಸಂವಿಧಾನದ ಆಶಯಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ಅಧಃಪತನವಾಗುತ್ತಿದೆ. ಸಾಮಾಜಿಕ ನ್ಯಾಯ ಕನಸಿನ ಮಾತಾಗಿದೆ. ದೇಶದಲ್ಲಿ ನಿರುದ್ಯೋಗ, ಯುವಕರು ಹೇಳಿದರು. ಹತಾಶೆಗೆ ದೂಡಿದೆ. ಕೋಮು ರಾಜಕಾರಣದಿಂದ ಪ್ರಗತಿಗೆ, ಜಾತ್ಯಾತೀತ ತತ್ವಕ್ಕೆ ಅಪಹಾಸ್ಯವಾಗಿದೆ ಎಂದು ದೂರಿದರು. ಸ್ವಾತಂತ್ರ್ಯ, ಸಮಾನತೆ, ಸಹೋರತ್ವ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶಮಾಡುತ್ತಿರುವ ಆರ್ ಎಸ್‌ಎಸ್ ಬಿಜೆಪಿ ದುರಾಡಳಿತದ ವಿರುದ್ಧ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನಯ ಬೃಹತ್ ಐಕ್ಯತಾ...
Politics News

ಕಾಂಗ್ರೆಸ್ ಸಂವಿಧಾನ ತಿರುಚಿದೆ: ಸಿಎಂ ಬೊಮ್ಮಾಯಿ

K2 ಪೊಲಿಟಿಕಲ್ ನ್ಯೂಸ್ : ಸಂವಿಧಾನವನ್ನು ತಿರುಚಿರುವುದು ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಜೆಪಿ ಸಂವಿಧಾನವನ್ನು ತಿರುಚಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...
1 21 22 23 24
Page 23 of 24