This is the title of the web page
This is the title of the web page
Education News

ಉತ್ತಮ ಶಿಕ್ಷಣ ಮತ್ತು ಸಾಮರ್ಥ್ಯ ಹೆಚ್ಚಿಸಲು ಹೀಗೆ ಕಲಿಯಿರಿ


K2 ನ್ಯೂಸ್ ಡೆಸ್ಕ್ : ಶಿಕ್ಷಣ ಮತ್ತು ಕಲಿಕೆಯಲ್ಲಿ ಸಾಕಷ್ಟು ಹಂತಗಳಿವೆ, ಕಲಿಕೆ ಎಂದರೆ ಶಾಲಾ ಕಾಲೇಜುಗಳಿಗೆ ಹೋಗಿ ಮಾತ್ರ ಕಲಿಯುವುದು ಅಲ್ಲ ಅದರ ಹೊರತಾಗಿಯೂ ಪ್ರಾಯೋಗಿಕ ಕಲಿಕೆ ಇದೆ ಅದನ್ನು ಅನೌಪಚಾರಿಕ ಕಲಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಮತ್ತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಚಿತ್ರಗಳು, ಬಣ್ಣಗಳು, ಗ್ರಾಫ್‌ಗಳು ಮತ್ತು ಇತರ ಆರಾಮದಾಯಕ ಕಲಿಕೆಯಿಂದ ಇದು ಸೂಕ್ತವಾಗಿರುತ್ತದೆ. ಸುತ್ತ ಮುತ್ತಲಿನ ಸಣ್ಣ ಬದಲಾವಣೆಯನ್ನೂ ಕೂಡ ನೀವು ಇದರಲ್ಲಿ ಗಮನಿಸಬಹುದು.

ಶ್ರವಣ ಮಾಧ್ಯಮ: ಈ ಕಲಿಯುವವರು ಧ್ವನಿ ಅಥವಾ ಮಾತಿನ ಮೂಲಕ ಮಾಹಿತಿಯನ್ನು ಪ್ರಸರಣ ಮಾಡುತ್ತದೆ. ಸಂಗೀತ, ಪ್ರಾಸಗಳು ಮತ್ತು ಲಯಬದ್ಧವಾಗಿ ಕಲಿಕಾ ವಿಷಯವನ್ನು ಗ್ರಹಿಸಬಹುದು. ಇದು ಓದುವುದಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿಯುವ ಸಂಗತಿಯಾಗಿದೆ.
ಮೌಖಿಕ ಅಥವಾ ಭಾಷಾ ಕಲಿಕೆ ಓದುವುದಕ್ಕಿಂತ ಹೆಚ್ಚಿನದಾಗಿ ಇನ್ನೊಬ್ಬರೊಟ್ಟಿಗೆ ಚರ್ಚೆ ಮಾಡುವುದು ಮತ್ತು ಸಂವಹನ ನಡೆಸುವುದರ ಮೂಲಕ ಹೆಚ್ಚು ವಿಷಯಗಳು ನೆನಪಿನಲ್ಲಿರುತ್ತವೆ. ನಿಮ್ಮ ಸ್ನೇಹಿತರು ಇಲ್ಲವೇ ತಂದೆ, ತಾಯಿಯರೊಟ್ಟಿನ ಸಂವಹನ ಕೂಡ ಕಲಿಕೆಯ ಒಂದು ಭಾಗವಾಗುತ್ತದೆ.

ಗ್ರಹಿಕೆ: ಏಕೆ, ಎಲ್ಲಿ, ಹೇಗೆ, ಯಾವಾಗ ಎಂಬ ವಿಷಯಗಳ ಕುರಿತು ಅರ್ಥಮಾಡಿಕೊಳ್ಳುವುದು ಹಾಗೂ ಕಲಿಕೆಯ ಸಂದರ್ಭದಲ್ಲಿ ಸಿಯಾಗಿ ಗ್ರಹಿಸುವುದು ಕೂಡ ಮುಖ್ಯವಾಗುತ್ತದೆ.
ಶಾರೀರಿಕ ಕಲಿಕೆ: ಭೌತಿಕ ಕಲಿಯುವವರು ಅನುಭವದ ಮೂಲಕ ಜ್ಞಾನವನ್ನು ಹೊಂದುತ್ತಾರೆ. ಪ್ರಾಯೋಗಿಕ ತರಬೇತಿಯನ್ನು ನೀಡದ ಕಲಿಕೆಯು ಉತ್ತಮ ಅನುಭವದ ಮೂಲಕ ನೆನಪಿಸನಲ್ಲಿ ಶಾಶ್ವತವಾಗಿಡಲು ಸಹಾಯವಾಗುತ್ತದೆ.

ಗ್ರೂಪ್​ ಸ್ಟಡಿ: ಹಲವಾರು ಜನರ ನಡುವೆ ಕೂತು ನಿಮ್ಮ ಸಮಸ್ಯೆಗಳನ್ನು ನೇರಾ ನೇರಾ ಚರ್ಚೆ ಮಾಡುವುದು ಮುಖ್ಯವಾಗಿರುತ್ತದೆ. ಹಾಗೆ ಮಾಡಿದಾಗ ಮಾತ್ರ ನಿಮ್ಮ ಗ್ರಹಿಕೆ ಮತ್ತು ಕಲಿಕೆ ಸುಲಭವಾಗುತ್ತದೆ. ವಿಷಯಗಳ ಸಮ್ಮಿಲನ ಮಾಡುವುದು. ನೀವು ಕಲಿಯುತ್ತಿರುವ ವಿಷಯಗಳಿಕೆ ಇನ್ನೊಂದು ವಿಷಯಕ್ಕೆ ಉದಾಹರಣೆ ಮೂಲಕ ಲಿಂಕ್ ಮಾಡಿ ಅಭ್ಯಾಸ ಮಾಡುವುದು. ಕೇವಲ ಪುಸ್ತಕದ ಉದಾಹರಣೆಯಲ್ಲ ಜೀವನದ ಉದಾಹಣೆ ನೀಡಬೇಕು.


[ays_poll id=3]