
ಲಿಂಗಸುಗೂರು : ಜಿಟಿ ಜಿಟಿ ಸುರಿಯುತ್ತಿರುವ ಮಳೆಯಲ್ಲಿಯೇ ತಿಂಥಣಿ ಬ್ರಿಡ್ಜ್- ಕಲ್ಮಲಾ ರಾಜ್ಯ ಹೆದ್ದಾರಿಗೆ ಡಾಂಬರೀಕರಣ ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅನುದಾನದ ಅಡಿ ₹55 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಕಾಮಗಾರಿ ಕಳೆದ ಮೂರು ತಿಂಗಳಿಂದ ನಿಧಾನಗತಿಯಲ್ಲಿ ಸಾಗಿದೆ. ರಸ್ತೆಗೆ ಡಾಂಬರೀಕರಣ ಮಾಡುವ ಸಂದರ್ಭದಲ್ಲಿ ವಾತಾವರಣ ಬಿಸಿಯಾಗಿರಬೇಕು.
ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಡಾಂಬರು ಹಾಕಲಾಗುತ್ತಿದೆ. ಸ್ಥಳದಲ್ಲಿ ಯಾವ ಇಲಾಖೆಯ ಅಧಿಕಾರಿ ಕೂಡ ಇಲ್ಲದಿರುವುದರಿಂದ ಕಳಪೆ ಕಾಮಗಾರಿಗೆ ಕಾರಣವಾಗಿದೆ ಎಂದು ನಿಲುಂಜಿ ಗ್ರಾಮಸ್ಥರು ದೂರಿದ್ದಾರೆ. ನಿಲುಂಜಿ ಕ್ರಾಸ್‌ನಲ್ಲಿ ಮಳೆಯಲ್ಲಿಯೇ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿತ್ತು.
ವಾತಾವರಣ ತುಂಬಾ ತಂಪಾಗಿತ್ತು ಅಲ್ಲದೇ ಮಳೆ ಕೂಡ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಡಾಂಬರೀಕರಣ ಮಾಡುವುದು ಎಷ್ಟು ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]