This is the title of the web page
This is the title of the web page
State NewsVideo News

ಅನಂತಕುಮಾರ್ ಹೆಗಡೆ ರಾಯಚೂರಿಗೆ ಬಂದರೆ ಕಲ್ಲೇಟು ಗ್ಯಾರೆಂಟಿ..


K2kannadanews.in

ರಾಯಚೂರು : ಉತ್ತರ ಕನ್ನಡ (Uthara kannada) ಜಿಲ್ಲೆಯ ಸಂಸದ (MP) ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿಗಳನ್ನು (CM) ಏಕವಚನದಲ್ಲಿ(Single word) ಅಸಂವಿಧಾನಿಕ ಪದ ಬಳಕೆ ಮಾಡಿ ನಿಂದಿಸಿರುವದು ಖಂಡನೀಯ. ರಾಯಚೂರಿಗೆ ಬಂದರೆ ಕಲ್ಲು ಹೊಡೆಯುವುದು (Stone pelting) ಶತಸಿದ್ಧ ಎಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಅನಂತಕುಮಾರ ಹೆಗಡೆಗೆ (Anant Kumar hegade) ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramayya) ಅವರು ಹಾಲುಮತ ಸಮಾಜದ ಎರಡನೇ ಆರಾಧ್ಯದೈವ ಇಂತವರಿಗೆ ಮಗನೇ ಎಂಬ ಏಕವಚನದಲ್ಲಿ ಪದಬಳಕೆ ಮಾಡಿರುವುದಕ್ಕೆ ಕೆಂಡಮಂಡಲವಾದರು. ಸಂಸದ ಅನಂತಕುಮಾರ ಹೆಗಡೆ ಅವರ ಮಾತಿನ ಧಾಟಿಯಲ್ಲಿಯೇ ಉತ್ತರಿಸಲು ಮುಂದಾದರು.

ಇಷ್ಟು ದಿನ ಎಲ್ಲಿ ಮಲಗಿದ್ದೆ ಅನಂತಕುಮಾರ ಹೆಗಡೆ, ಕೊರೋನಾ (Corona) ಕಾಲದಲ್ಲಿ ಜನರಿಗೆ ನಿನ್ನ ಸೇವೆ ಏನು? ಸಂಸದೀಯ ಪಟುವಾಗಿ ಮಾಜಿ ಕೇಂದ್ರ ಸಚಿವರಾಗಿ (central ex minister) ಕಾರ್ಯನಿರ್ವಹಿಸಿರುವ ಹಾಗೂ ಸುಸಂಸ್ಕೃತ ಮನೆತನದ ವ್ಯಕ್ತಿಯಾಗಿದ್ದುಕೊಂಡು ಸಿದ್ಧರಾಮಯ್ಯನವರ ಬಗ್ಗೆ ಹೀಗೆ ಕೀಳರಿಮೆಯಲ್ಲಿ ಮಾತನಾಡುತ್ತಿರುವುದು ಎಷ್ಟು ಸರಿ? ನಿನ್ನ ಹಾಗೆ ನಾವು ನಿನಗೆ ಮಗನೇ ಎಂದು ಸಂಬೋಧಿಸಿ ಮಾತನಾಡಬಹುದು ಅದು ನಮ್ಮ ಹಾಲುಮತ ಸಂಸ್ಕೃತಿಯಲ್ಲ. ನೀವು ರಾಯಚೂರಿಗೆ ಕಾಲಿಟ್ಟರೆ ಕಲ್ಲಿನಿಂದ ಹೊಡೆಯುತ್ತೇವೆ ಎಂದು ಸಿಟ್ಟು ಹೊರಹಾಕಿದರು.


[ays_poll id=3]