
ಹಟ್ಟಿ : ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ರೋಗದ ಪರಿಣಾಮ ಸಾವನ್ನಪ್ಪುತ್ತಿರುವ ಘಟನೆ ಹಟ್ಟಿ ಪಟ್ಟಣದಲ್ಲಿ ನಡೆದಿದೆ. ಹಂದಿಗಳ ಸಾವಿನಿಂದ ಸ್ಥಳೀಯರು ಭೀತಿಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ರೋಗ ಕಾಣಿಸಿಕೊಂಡಿದೆ. ಒಂದು ತಿಂಗಳಿನ ಅಂತರದಲ್ಲಿ ಸುಮಾರು 100ಕ್ಕೂ ಹೆಚ್ಚು ಹಂದಿಗಳು ಆಫ್ರಿಕನ್ ಸ್ವೈನ್ ಫ್ಲೂ ರೋಗಕ್ಕೆ ಮೃತಪಟ್ಟಿವೆ. ಹಂದಿಗಳ ಸಾವು ಕುರಿತಂತೆ ಮಾದರಿ ಪರೀಕ್ಷೆಗೆ ಒಳಪಡಿಸಿದ ವೇಳೆ ಆಫ್ರಿಕನ್ ಹಂದಿ ಜ್ವರ ಎನ್ನುವುದು ಖಾತರಿಯಾಗಿದೆ. ಹಂದಿ ಜ್ವರದಿಂದ ಅಲ್ಲಿ ವಾಸಿಸುವ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಹಟ್ಟಿ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಹಂದಿಗಳು ಆಫ್ರಿಕನ್ ಸ್ವೈನ್ ಫ್ಲೂದಿಂದ ಬಹಳಷ್ಟು ಮೃತಪಡುತ್ತಿರುವುದರಿಂದ ಜನರಲ್ಲಿ ಭಯ ಹುಟ್ಟಿದೆ. ಹಂದಿಗಳು ಸಾಯುತ್ತಿದ್ದರೂ ಪಟ್ಟಣ ಪಂಚಾಯಿತಿಯು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವೈದ್ಯರ ಪ್ರಕಾರ ಈ ಒಂದು ಆಫ್ರಿಕನ್ ಸ್ವೈನ್ ಫ್ಲೋರ್ ಮನುಷ್ಯರಿಗೆ ಹರಡುವುದಿಲ್ಲ, ಹಾಗಾಗಿ ಭಯಪಡುವ ಅವಶ್ಯಕತೆ ಇಲ್ಲ ಎಂಬುದು ವೈದ್ಯರವಾದವಾಗಿದೆ.
![]() |
![]() |
![]() |
![]() |
![]() |
[ays_poll id=3]