This is the title of the web page
This is the title of the web page
Crime News

ವೈದ್ಯರ ಚಿಕಿತ್ಸಾ ಕೊಠಡಿಯಲ್ಲಿ ಎಸಿ ಬ್ಲಾಸ್ಟ್ : ವೈದ್ಯರಿಗೆ ಗಾಯ


ಮುದಗಲ್ : ವೈದ್ಯರ ಕೊಠಡಿಯಲ್ಲಿ ಅಳವಡಿದ್ದ ಎಸಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಎಸಿ ಸುಟ್ಟು ಹೋಗಿರುವ ಘಟನೆ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್​​ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ​ಶಾರ್ಟ್​​ ಸರ್ಕ್ಯೂಟ್​ ನಿಂದ​​ ಎಸಿ ಬ್ಲಾಸ್ಟ್​ ಆಗಿದಿದೆ. ಈ ವೇಳೆ ಓರ್ವ ವೈದ್ಯರ ಕೈಗೆ ಗಾಯಗಳಾಗಿವೆ. ದಿವ್ಯ ದೃಷ್ಟಿ ಫೌಂಡೇಶನ್​​ನಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯುತ್ತಿತ್ತು. ಶಿಬಿರದ ಲಾಭಕ್ಕಾಗಿ 100 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಘಟನೆಯಿಂದ ದಟ್ಟ ಹೊಗೆ ಆವರಿಸಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇಂದು ನಡೆಯಬೇಕಿದ್ದ ನೇತ್ರ ಶಸ್ತ್ರಚಿಕಿತ್ಸೆಯನ್ನು ರದ್ದುಗೊಳಿಸಿ ನವಂಬರ್ 3 ಮತ್ತು 4ಕ್ಕೆ ಮುಂದೂಡಲಾಗಿದೆ ಎಂದು ದಿವ್ಯ ದೃಷ್ಟಿ ಪೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ ಅವರು ತಿಳಿಸಿದ್ದಾರೆ.


[ays_poll id=3]