
ಮಾನ್ವಿ : ಜಿಲ್ಲೆಯಲ್ಲಿ ತಲುಷಿತ ನೀರು ಕುಡಿದು ಎಂಟು ಜನ ಅಸ್ವಸ್ಥಗೊಂಡ ಘಟನೆ ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಎರಡು ಮನೆಗಳ ಎಂಟು ಜನರು ರಾತ್ರಿ ಊಟ ಮಾಡಿದ ನಂತರ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಾಂಸಾಹಾರ ಮತ್ತು ಕಲುಷಿತ ನೀರು ಸೇವಿಸಿದ್ದೆ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸಿದ್ದಮ್ಮ (68), ಆಂಜನೇಯ (7), ಅಮರಗುಂಡಪ್ಪ (60), ಗಂಗಮ್ಮ (65), ಅಯ್ಯಮ್ಮ (68), ಯಲ್ಲಮ್ಮ (29), ಲಕ್ಷ್ಮೀ (24) ಮತ್ತು ಫಕೀರಪ್ಪ (35 ಅಸ್ವಸ್ಥಗೊಂಡಿದ್ದಾರೆ. ಪೊತ್ನಾಳ, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅಸ್ವಸ್ಥಳಾದ ಗಂಗಮ್ಮ ಅವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಒಂದು ತಿಂಗಳಿಂದ ಗ್ರಾಮದ ಖಾಸಗಿ ಶುದ್ದೀಕರಣ ಘಟಕ ಸ್ಥಗಿತವಾದ ಹಿನ್ನೆಲೆಯಲ್ಲಿ ಹಳ್ಳದ ನೀರು ಸೇವನೆ ಅನಿವಾರ್ಯವಾಗಿದೆ, ಮಳೆಯಿಂದ ಕಲುಷಿತ ನೀರು ಬರುತ್ತಿದೆ, ಹಳ್ಳದ ನೀರು ಸೇವನೆಯಿಂದ ವಾಂತಿ ಬೇಧಿ ಕಾಣಿಸಿಕೊಂಡಿಲ್ಲ. ಮನೆಯಲ್ಲಿ ಮಾಡಿದ್ದ ಮಾಂಸಾಹಾರ ಸೇವನೆಯಿಂದ ಹೀಗಾಗಿದೆ ಎಂದು ತಿಳಿದು ಬಂದಿದೆ. ಇದೀಗ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ ಮತ್ತು ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಕ್ಷೇತ್ರ ಆರೋಗ್ಯಾಧಿಕಾರಿ ಚಂದ್ರಶೇಖರಯ್ಯ ಹೇಳಿದರು.
![]() |
![]() |
![]() |
![]() |
![]() |
[ays_poll id=3]