This is the title of the web page
This is the title of the web page
Local News

ನಾಪತ್ತೆಯಾಗಿದ್ದ 4 ಅಪ್ರಾಪ್ತೆಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ : ಶಕ್ತಿ ಯೋಜನೆ ಅವಾಂತರ.


K2kannadanews.in

4 missing minors ಲಿಂಗಸುಗೂರು : ಒಂದೇ ಊರಿನ (Village) ಅಕ್ಕಪಕ್ಕದ ಮನೆಯ ಬಾಲಕಿಯರು (Girls) ನಾಪತ್ತೆಯಾಗಿದ್ದ ಘಟನೆ ನಡೆದಿತ್ತು. ಮನೆಯಿಂದ (Home) ಹೊರಟ ಬಾಲಕಿಯರು ಆಧಾರ್ ಕಾರ್ಡ್ ಹಿಡಿದು ಹೋಗಿದ್ದರು‌. ರಾತ್ರಿಯಾದರು ಮನೆಗೆ ಬಾರದನ್ನ ಕಂಡ ಪೋಷಕರು (Parents) ಪೊಲೀಸರಿಗೆ ದೂರು (complete) ನೀಡಿದ್ದರು. ಇದೀಗ ಅಪ್ರಾಪ್ತ ಬಾಲಕಿಯರು ತಿಂತಿಣಿ ಜಾತ್ರೆಯಲ್ಲಿ ಪತ್ತೆಯಾಗಿದ್ದಾರೆ.

ರಾಯಚೂರು (Raichur)  ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗುಂಟಿ ಗ್ರಾಮದ, ಒಂದೇ ಊರಿನ ಅಕ್ಕಪಕ್ಕದ ಮನೆಯ ಬಾಲಕಿಯರು ನಾಪತ್ತೆಯಾಗಿದ್ದರು. ಮನೆಯಲ್ಲಿ ಪೋಷಕರಿಗೆ ತಿಳಿಸದೇ ನಾಲ್ವರು ಅಪ್ರಾಪ್ತ ಬಾಲಕಿಯರು ಬಸ್ (Bus) ಹತ್ತಿ ಹೋಗಿದ್ದಾರೆ. ಈ ಒಂದು ಪ್ರಕರಣ ಉಚಿತ ಬಸ್ ಪಾಸ್ ಶಕ್ತಿ ಯೋಜನೆ (Shakthi yojane) ಅವಾಂತರ ಎಂದರೆ ತಪ್ಪಾಗಲಿಕ್ಕಿಲ್ಲ. ಮಕ್ಕಳ ನಾಪತ್ತೆ ಪ್ರಕರಣ (Missing case) ಗಂಭೀರವಾಗಿ ಪರಿಗಣಿಸಿದ ಲಿಂಗಸೂಗೂರು ಪೊಲೀಸರು. ಅಪ್ರಾಪ್ತ ಬಾಲಕಿಯರ ಪತ್ತೆಗೆ ವಿಶೇಷ ತಂಡ (Special team) ರಚಿಸಿ ಹುಡುಕಾಟ ನಡೆಸಿದ್ದರು.

ನಾಪತ್ತೆಯಾದ ಮಕ್ಕಳಿಗಾಗಿ ಲಿಂಗಸೂಗೂರು ಸುತ್ತಮುತ್ತ ಹಳ್ಳಿಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರು. ಒಂದು ತಂಡ ತಿಂಥಿಣಿ ಮೌನೇಶ್ವರ ಜಾತ್ರೆಯಲ್ಲೂ (Fare) ಮಕ್ಕಳಿಗಾಗಿ ಹುಡುಕಾಟ (Searching) ನಡೆಸುತ್ತಿದ್ದರು. ಜಾತ್ರೆಯಲ್ಲಿ ತಿರುಗಾಡಿ ಸುಸ್ತಾದ ಬಾಲಕಿಯರು ದೇವಸ್ಥಾನದ (Temple) ಬಳಿ ವಿಶ್ರಾಂತಿಗೆ ಕುಳಿತಿದ್ದಾಗ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ (Enquiry) ವೇಳೆ ಬಾಲಕಿಯರ ಕೈಯಲ್ಲಿ ಆಧಾರ್ ಕಾರ್ಡ್ (Adhar card) ಇರುವುದು ಪತ್ತೆಯಾಗಿದೆ. ಬಳಿಕ ನಾಲ್ವರು ಬಾಲಕಿಯರನ್ನು ಪೊಲೀಸ್ ಠಾಣೆಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಲಿಂಗಸೂಗೂರು (Longsuguru statinಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.


[ays_poll id=3]