This is the title of the web page
This is the title of the web page
Local News

21 ಗರ್ಭಿಣಿಯರ ಝೀಕಾ ಸ್ಯಾಂಪಲ್ ನೆಗೆಟಿವ್


ರಾಯಚೂರು : ರಾಜ್ಯದ ಮೊದಲ ಝೀಕಾ ವೈರಸ್ ಪತ್ತೆಯಾದ ಬೆನ್ನಲ್ಲೆ ಭಯಭೀತರಾಗಿದ್ದ ಜಿಲ್ಲೆಯ ಜನರಿಗೆ ನಿಟ್ಟುಸಿರು ಬಿಡುವಂತಹ ಹೊಸ ಮಾಹಿತಿಯೊಂದು ಪುಣೆಯ ವೈರಾಲಜಿ ಲ್ಯಾಬ್‌ನಿಂದ ಮಾಹಿತಿ ಬಹಿರಂಗವಾಗಿದೆ.

ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾದ ಬೆನ್ನಲ್ಲೆ 51 ಗರ್ಭಿಣಿಯ ಸ್ಯಾಂಪಲ್ ಪಡೆದು ವೈದ್ಯರು ಪುಣೆಯ ವೈರಾಲಜಿ ಲ್ಯಾಬ್​ಗೆ ಕಳಿಸಿದ್ದರು. ಈ ಪೈಕಿ 21 ಗರ್ಭಿಣಿಯರ ಝೀಕಾ ಸ್ಯಾಂಪಲ್ ನೆಗೆಟಿವ್ ಬಂದಿದ್ದು, ರಾಯಚೂರು ಜಿಲ್ಲೆಯ ಜನತೆಗೆ ಆತಂಕದಿಂದ ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ರಿಪೋರ್ಟ್‌ ಹೊರ ಬರುವ ಎಲ್ಲಾ ಸಾಧ್ಯತೆಗಳಿವೆ . ಝೀಕಾ ವೈರಸ್‌ ಈಡಿಸ್‌ ಸೊಳ್ಳೆಯಿಂದ ಹಬ್ಬುತ್ತದೆ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಆರಂಭದಲ್ಲಿ ಸೌಮ್ಯವಾಗಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಕ ರೋಗಗಳ ರೀತಿ ಬದಲಾಗುತ್ತವೆ.

ಅದರಂತೆಯೇ ಝೀಕಾ ವೈರಸ್‌ ಕೂಡ ಹಗಲಿನಲ್ಲಿ ಕಚ್ಚುವ ಈಡಿಸ್‌ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತ ಝಿಕಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.


[ays_poll id=3]