
K2 ನ್ಯೂಸ್ ಡೆಸ್ಕ್ : ಇದೊಂದು ಅಪರೂಪದ ಪ್ರಕರಣ. 20ನೇ ವಯಸ್ಸಿನಲ್ಲಿ ಎಮ್ಮೆ ಕದ್ದು ತಲೆ ಮೆರ್ಸಿಕೊಂಡಿದ್ದ ವ್ಯಕ್ತಿಯನ್ನು 57 ವರ್ಷಗಳ ಬಳಿಕ ಪೊಲೀಸರು ಬಂಧಿಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
1965 ಏಪ್ರಿಲ್ 25ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೋಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಕುಲಕರ್ಣಿ ಎಂಬುವವರ ಎರಡು ಎಮ್ಮೆ ಹಾಗೂ ಒಂದು ಕರುವನ್ನು ಕದ್ದು ಆರೋಪಿ ಪರಾರಿಯಾಗಿದ್ದ, ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಟಾಕಳಗಾಂವ್ ಗ್ರಾಮದ ನಿವಾಸಿ ಗಣಪತಿ ವಿಠ್ಠಲ ವಾಗ್ಮೋರೆ ಬಂಧಿತ ಆರೋಪಿ. ಆರೋಪಿ ಗಣಪತಿ ವಿಠ್ಠಲ ವಾಗ್ಮೋರೆ ಕಳ್ಳತನ ಮಾಡಿದಾಗ ಆತನಿಗೆ ಕೇವಲ 20 ವರ್ಷ. ಈಗ ಆತನಿಗೆ 80 ವರ್ಷ ವಯಸ್ಸಾಗಿದ್ದು, ಇಳಿವಯಸ್ಸಿನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ಅಂದು ಎಮ್ಮೆ ಕದ್ದ ವಾರದಲ್ಲಿಯೇ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿ, ಜಾಮೀನಿನ ಮೇಲೆ ಹೊರಬಂದಿದ್ದ. ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕಳೆದ 57 ವರ್ಷಗಳಿಂದ ಪೊಲೀಸರು ಈತನಿಗಗಿ ಹುಡುಕಾಟ ನಡೆಸಿದ್ದರು. ಆದರೂ ಸಿಕ್ಕಿರಲಿಲ್ಲ. ಆರೋಪಿಗಳು ಕೋರ್ಟ್ ಗೆ ಹಾಜರಾಗದೇ ಇರುವ ಲಾಂಗ್ ಪೆಂಡೀಂಗ್ ರಿಪೋರ್ಟ್ ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೂ ಸೂಕ್ತ ಬಹುಮಾನ ನೀಡುವುದಾಗಿ ಬೀದರ್ ಜಿಲ್ಲಾ ಎಸ್ ಪಿ ಚೆನ್ನಬಸವಣ್ಣ ಎಲ್.ಎಸ್ ಘೋಷಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]