This is the title of the web page
This is the title of the web page
Feature Article

ರಾಯಚೂರು ಹಟ್ಟಿ ಚಿನ್ನದಗಣಿಯಲ್ಲಿ 1,553 ಕೆಜಿ ಉತ್ಪಾದನೆ..!


K2kannadanews.in

Hatti gold mine ರಾಯಚೂರು : ದೇಶದ ಏಕೈಕ ಸರ್ಕಾರಿ (Government) ಸ್ವಾಮ್ಯದ ಹಟ್ಟಿ ಚಿನ್ನದ ಗಣಿ (Gold main) ಕಂಪನಿಯಲ್ಲಿ ಪ್ರಸ್ತುತ ವರ್ಷದಲ್ಲಿ ಒಟ್ಟು 1,553 ಕೆ.ಜಿ (KG) ಚಿನ್ನ ಉತ್ಪಾದಿಸುವ ಮೂಲಕ ಶೇ 90ರಷ್ಟು ಗುರಿ (Target) ಸಾಧಿಸಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ (Hatti) ಗ್ರಾಮದಲ್ಲಿರುವ ಚಿನ್ನದ ಗಣಿಯಲ್ಲಿ, ಕಳೆದ ಆರ್ಥಿಕ ವರ್ಷದಲ್ಲಿ (Economic year) 7.51 ಲಕ್ಷ ಟನ್ ಅದಿರು ತೆಗೆದು ಸಂಸ್ಕರಿಸುವ ಗುರಿ ಹೊಂದಿತ್ತು. ಅಂತೆಯೇ ಒಟ್ಟು 7.18 ಲಕ್ಷ ಟನ್ ಅದಿರು ತೆಗೆದಿದ್ದು, 1,750.578 ಕೆ.ಜಿ. ಚಿನ್ನ ಉತ್ಪಾದನೆಯ ಗುರಿ ಹೊಂದಿತ್ತು. ಅದರಲ್ಲಿ ಸಧ್ಯ 1,553.110 ಕೆ.ಜಿ ಚಿನ್ನ ಉತ್ಪಾದಿಸಿದೆ.

2023ರಿಂದ ತಿಂಗಳುವಾರು ಉತ್ಪಾದನೆ ನೋಡಿದಾಗ :

* ಏಪ್ರಿಲ್‌ನಲ್ಲಿ 98.846 ಕೆ.ಜಿ,
* ಮೇ ನಲ್ಲಿ 94.234 ಕೆ.ಜಿ,
* ಜೂನ್‌ನಲ್ಲಿ 98.542 ಕೆ.ಜಿ,
* ಜುಲೈನಲ್ಲಿ 99.642 ಕೆ.ಜಿ,
* ಆಗಸ್ಟ್‌ನಲ್ಲಿ 110.600 ಕೆ.ಜಿ,
* ಸೆಪ್ಟೆಂಬರ್‌ನಲ್ಲಿ 109.427 ಕೆ.ಜಿ,
* ಅಕ್ಟೋಬರ್‌ನಲ್ಲಿ 113.260 ಕೆ.ಜಿ,
* ನವೆಂಬರ್‌ನಲ್ಲಿ 83.273 ಕೆ.ಜಿ
* ಡಿಸೆಂಬರ್‌ನಲ್ಲಿ 118.372 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ.

ಪ್ರಸಕ್ತ ವರ್ಷದ ತಿಂಗಳುವಾರಿ ಉತ್ಪಾದನೆ :

* ಜನವರಿಯಲ್ಲಿ 132.517 ಕೆ.ಜಿ,
* ಫೆಬ್ರುವರಿಯಲ್ಲಿ 253.171 ಕೆ.ಜಿ,
* ಮಾರ್ಚ್‌ನಲ್ಲಿ 241.221 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ ಎಂದು ಆಡಳಿತ ಮಂಡಳಿಯು ಮಾಹಿತಿ ನೀಡಿದೆ.

ಅಧಿಕಾರಿಗಳು ಹಾಗೂ ಕಾರ್ಮಿಕರ ಪರಿಶ್ರಮದ ಫಲವಾಗಿ ಶೇ 90ರಷ್ಟು ಚಿನ್ನ ಉತ್ಪಾದನೆ ಸಾಧ್ಯವಾಗಿದೆ.

 

 


[ays_poll id=3]