This is the title of the web page
This is the title of the web page
Politics News

ಜಿಪಂ, ತಾಪಂ ಚುನಾವಣೆ ಘೋಷಣೆಗೆ ಸಿದ್ಧತೆ ಚುನಾವಣಾ ಆಯೋಗದಿಂದ ಸೂಚನೆ


K2 ನ್ಯೂಸ್ ಡೆಸ್ಕ್ : ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಇತ್ತೀಚಿಗಷ್ಟೇ ವಿಧಾನಸಭಾ ಚುನಾವಣೆ ಯಶಸ್ವಿಯಾಗಿ ಮುಗಿಸಿದೆ. ಇದೀಗ ಮತ್ತೊಂದು ಚುನಾವಣೆ ನಡೆಸಲು ಸಿದ್ಧತೆ ಆರಂಭ ಮಾಡಿಕೊಳ್ಳುವಂತೆ ಉಪವಿಭಾಗ ಅಧಿಕಾರಿಗಳು ಮತ್ತು ತಹಸಿಲ್ದಾರ್ ಗಳಿಗೆ ಸೂಚನೆ ನೀಡಿದೆ.

ಮತದಾರರ ಪಟ್ಟಿ ಸಿದ್ಧತೆ, ಮತದಾನ ಕೇಂದ್ರಗಳ ಸ್ಥಾಪನೆ ಸಂಬಂಧ ಕಾರ್ಯಪ್ರವೃತ್ತರಾಗವಂತೆ ರಾಜ್ಯ ಚುನಾವಣಾ ಆಯೋಗದಿಂದ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಚುನಾವಣೆ ಆಯೋಗದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮೇ 29 ರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಆರಂಭಿಸಲು ತಿಳಿಸಲಾಗಿದೆ. ಜೂನ್ 4ರವರೆಗೆ ಈ ಕಾರ್ಯ ನಡೆಯಲಿದೆ. ಜೂನ್ 5 ರಿಂದ 13 ರವರೆಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಯಲಿದ್ದು, ಜೂನ್ 14ರಿಂದ ಕರಡು ಮತದಾರರ ಪಟ್ಟಿ ಪ್ರಕಟ ಸಲಾಗುವುದು. ಜೂನ್ 19ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 22 ರಂದು ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವಾಗಿದೆ. ಮತ್ತೊಮ್ಮೆ ಪರಿಶೀಲನೆ ಕಾರ್ಯ ಜೂನ್ 25ರಂದು ನಡೆಸಲಾಗುವುದು. ಜೂನ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣೆ ಆಯೋಗ ತಿಳಿಸಿದೆ.


[ays_poll id=3]