This is the title of the web page
This is the title of the web page
State News

ರಾಮ ಮಂದಿರದ ಮೇಲೆ ಹಸಿರು ಭಾವುಟ ಹಾಕಿದ ಯುವಕ : ಪ್ರತಿಭಟನೆ..


K2kannadanews.in

Ayodhya ರಾಯಚೂರು : ಅಯ್ಯೋದ್ಯ ಶ್ರೀ ರಾಮಂದಿರ (Rama mandir) ಬಗ್ಗೆ ಅವಹೇಳನ, ಸ್ಟೇಟಸ್ (Stats) ಹಾಕಿಕೊಂಡ ಯುವಕನ (Young man) ವಿರುದ್ದ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆ (police station) ಮುಂದೆ ಭಜನೆ ಮಾಡಿವ ಮೂಲಕ ಪ್ರತಿಭಟನೆ (Protest) ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಗಬ್ಬೂರು ಪೊಲೀಸ್ ಠಾಣೆ ಮುಂದೆ ಭಜನೆ ಮಾಡಿ, ಹಿಂದೂ ಕಾರ್ಯಕರ್ತರು ಅಸಮಧಾನ ವ್ಯಕ್ತಪಡಿಸಿದರು. ಅಯೋಧ್ಯದಲ್ಲಿ ಲೋಕಾರ್ಪಣೆಯಾದ ರಾಮಮಂದಿರದ ಮೇಲೆ, ಮುಸ್ಲಿಂ ಯುವಕ ರಾಮಮಂದಿರ ಮೇಲೆ ಹಸಿರು ಧ್ವಜವನ್ನು (Green flag) ಹಾಕಿರುವಂತೆ ಎಡಿಟ್ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ದೇಶಾದ್ಯಂತ ಸಾರ್ವಜನಿಕರು ಆಚರಣೆ ಮಾಡಿದ ಬೆನ್ನಲ್ಲೇ ಕೋಮುಸೌಹಾರ್ದತೆ ಕದಡುವ ಯತ್ನಕ್ಕೆ ಕೈಹಾಕಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

 

ಮಸರಕಲ್ ಗ್ರಾಮದ ಯುವಕ ಸೈಯದ್ ಇಸಾರ್ ಕೃತ್ಯ ಮಾಡಿದ್ದ. ರಾಮ ಮಂದಿರ ಮೇಲೆ ಪವರ್ ಆಫ್ ಇಸ್ಲಾಂ ಎಂದು ಬರೆದು, ವಾಟ್ಸಾಪ್, ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವೀಡಿಯೋವನ್ನು ಯುವಕ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆದ ನಂತರ ಸ್ಟೇಟಸ್ ಡಿಲೀಟ್ ಮಾಡಿದ್ದ. ಇದರಿಂದ ಕೆರಳಿದ ಹಿಂದೂ ಕಾರ್ಯಕರ್ತರು ಗಬ್ಬೂರು ಠಾಣೆ ಮುಂದೆ ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪರಸ್ಥಿತಿ ಗಂಭೀರತೆ ಪಡೆಯುತ್ತಿದ್ದಂತೆ ಯುವಕನನ್ನು ಸೈಯದ್ ಇಸಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]