ರಾಯಚೂರು : ಜಿಲ್ಲೆಯ ಬಿಸಿಎಂ ಹಾಸ್ಟೆಲುಗಳ ಕಾರ್ಮಿಕರಿಗೆ 8 ತಿಂಗಳ ಬಾಕಿ ವೇತನ ಪಾವತಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಯಲ ಕಾರ್ಮಿಕರ ಸಂಘ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ವಸತಿ ನಿಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾನ ಇಲಾಖೆ, ಸಮಾಜ ಕಲ್ಯಾಣ, ಆಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯ ಕಾರ್ಮಿಕರಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಕುರಿತು ನ.28 ರಂದು ಪ್ರತಿಭಟನೆ ನಡೆಸಿದ ನಂತರ ಡಿಸೆಂಬರ್ ತಿಂಗಳ ಒಳಗೆ 7-8 ತಿಂಗಳ ಬಾಕಿ ವೇತನವನ್ನು ಪಾವತಿಸುತ್ತೆವೆಂದು ಹೇಳಿ ಕೇವಲ 3 ತಿಂಗಳ ವೇತನವನ್ನು ಮಾತ್ರ ಪಾವತಿಸಲಾಗಿದೆ. ಇದರಿಂದ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಸಿಲುಕಿದ್ದಾರೆ ಎಂದು ಆಗ್ರಹಿಸಿದರು. ಆದ್ದರಿಂದ ಕೂಡಲೇ ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ಕಾರ್ಮಿಕರ ವೇತನವನ್ನು...