This is the title of the web page
This is the title of the web page
State News

32 ಪಿಡಿಓಗಳ ಅಮಾನತು ಮತ್ತು ಕ್ರಿಮಿನಲ್ ಕೇಸ್ ಬಗ್ಗೆ ಸಿಇಓ ಹೇಳಿದ್ದೇನು..


K2kannadanews.in

ZP News ರಾಯಚೂರು : ನರೇಗಾ ಯೋಜನೆಯಡಿ (MNREG) 150 ಕೋಟಿಗೂ ಅಧಿಕ ಹಣದ ಅಕ್ರಮ‌ ಪ್ರಕರಣಕ್ಕೆ ಸಂಬಂದಿಸಿದಂತೆ, 32 ಪಿಡಿಓಗಳ (PDO) ಅಮಾನತು ಮಾಡಲಾಗಿದೆ ಎಂದು CEO ಪಾಂಡ್ವೆ ರಾಹುಲ್ ತುಕಾರಾಂ ಹೇಳಿದರು.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ, 2020-21 ರಿಂದ 22-23 ರ ಸಾಲಿನಲ್ಲಿ ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿದ್ದ ಭ್ರಷ್ಟಾಚಾರ (Corruption) ಪ್ರಕರಣದಲ್ಲಿ, ಲೆಕ್ಕ ಪರಿಶೋಧನಾ ಸಮಿತಿ ತನಿಖೆ ವೇಳೆ ಅಕ್ರಮ ಬಯಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 4 ಜನ ಪಿಡಿಓ ಅಮಾನತು (Suspend), ಇಓ (EO), ಎಡಿ (ED) ಮೇಲೆ ಕ್ರಿಮಿನಕ್ ಕೇಸ್ (Criminal Case) ದಾಖಲು ಮಾಡಲಾಗಿತ್ತು.ಇದೀಗ ಇತರೆ 29 ಜನ ಪಿಡಿಓಗಳ‌ನ್ನು ಅಮಾನತು ಮಾಡಲಾಗಿದೆ ಎಂದರು.

ಪ್ರಕರಣದಲ್ಲಿ ಭಾಗಿಯಾದ ಅಷ್ಟೂ ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಆದೇಶ ಮಾಡಲಾಗಿದೆ. ಕ್ರಿಮಿನಲ್ ಕೇಸ್ ದಾಖಲಿಸಲು ತಾಂತ್ರಿಕ ಸಮಸ್ಯೆ (Technical problem) ಇದ್ದು, ಪ್ರಕರಣ ದಾಖಲಿಸಲು ಬರುವುದಿಲ್ಲ‌ ಎಂದು‌ ಪೊಲೀಸ್ ಇಲಾಖೆ ಹಿಂಬರಹ ನೀಡಿದ ಹಿನ್ನಲೆ ಫೈನಲ್ ರಿಪೋರ್ಟ್ (Report) ಬಂದ ಬಳಿಕ ನಿರ್ಧಾರ ತೆಗರದುಕೊಳ್ಳಲಾಗುವುದು. ಈ ಕುರಿತು ಕೇಂದ್ರಕ್ಕೆ‌ ಪತ್ರ ಬರೆದಿರುವುದಾಗಿ ಸಿಇಓ ಪಾಂಡ್ವೆ ರಾಹುಲ್ ತುಕಾರಾಂ ಹೇಳಿದರು.


[ays_poll id=3]