
ರಾಯಚೂರು : ನಗರದ ಎಂ.ಈರಣ್ಣ ವೃತ್ತದಲ್ಲಿ ಮಾಡಿರುವ ತರಕಾರಿ ಮಾರುಕಟ್ಟೆಯಿಂದ ಸಂಚಾರಕ್ಕೆ ಅಡ್ಡಿ ಆಗುತ್ತಿದ್ದು ತರಕಾರಿ ಮಾರುಕಟ್ಟೆಯನ್ನು ಉಸ್ಮಾನಿಯಾ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ್ ನಾಯಕ್ ಅವರು ಆದೇಶ ಹೊರಡಿಸಿದ್ದಾರೆ.
ರಾಯಚೂರು ನಗರದ ಪ್ರಮುಖ ವೃತ್ತವಾದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರುಕಟ್ಟೆ ಮಾಡಿರುವ ಕಾರಣ, ನಗರದ ವಿವಿಧ ಬಡಾವಣೆಗಳಿಂದ ಜನರು ತರಕಾರಿ ಖರೀದಿ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಇತರ ವಾಹನಗಳು ಬರುವುದರಿಂದ,
ಎಂ.ಈರಣ್ಣ ವೃತ್ತವು ಪ್ರಮುಖ ಹಾದು ಹೋಗುವ ರಸ್ತೆಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆ ವೃತ್ತದ ಮೂಲಕ ಹಾದು ಹೋಗಲು ಸಂಚಾರಕ್ಕೆ ಅಡೆ ತಡೆಯಾಗಿರುತ್ತಿದೆ.
ಆದ್ದರಿಂದ ಈ ಮೊದಲಿನಂತೆ ಎಂ ಈರಣ್ಣ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಮುಖ್ಯ ಮಾರುಕಟ್ಟೆಗೆ ಅಂದರೆ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಮೂರು ದಿನಗಳ ಒಳಗಾಗಿ ಸ್ಥಳಾಂತರಿಸಿ, ಸಾರ್ವಜನಿಕರ ರಸ್ತೆಯ ಮೇಲೆ ಮುಕ್ತವಾಗಿ ಸಂಚರಿಸಲು ಅನುಕೂಲ ಮಾಡಿಕೊಡುವುದು
ಮತ್ತು 2023-24 ನೇ ಸಾಲೀನ ಮಾರುಕಟ್ಟೆ ಟೆಂಡರ್ ಪ್ರಕ್ರಿಯೆಯಂತೆ ಸದರಿ ಗುತ್ತೇದಾರರು ಸ್ಥಳಾಂತರ ಮಾಡಿದ ಸ್ಥಳದಲ್ಲಿ ಶುಲ್ಕ ವಸೂಲಿಯನ್ನು ಮಾಡಿಕೊಳ್ಳಲು ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವೃತ್ತದಲ್ಲಿ ಎಲ್ಲಾ ತರಕಾರಿ ವ್ಯಾಪಾರಿಗಳನ್ನ ಮುಖ್ಯ ಮಾರುಕಟ್ಟೆಗೆ ತೆರಳುವಂತೆ ಸೂಚಿಸಿ ಅಲ್ಲಿಂದ ಒಕ್ಕಲಿಸಲಾಯಿತು. ಈ ವೇಳೆ ನಗರಸಭೆಗೆ ಪ್ರಭಾರಿ ಪೌರಾಯುಕ್ತ ಮಹಮ್ಮದ್ ಜಿಲಾನಿ ಆಗಮಿಸಿ ಪರಿಶೀಲನೆ ಮಾಡಿದರು.
![]() |
![]() |
![]() |
![]() |
![]() |
[ays_poll id=3]