
K2 ನ್ಯೂಸ್ ಡೆಸ್ಕ್ : ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ಶೀಘ್ರದಲ್ಲಿಯೇ ಬೆಂಗಳೂರು ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಆರಂಭಿಸಲಿದೆ. ಬಹುತೇಕ ಕರ್ನಾಟಕದ ಈ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಊ ವರದಿಯಾಗಿದೆ.
ಬೆಂಗಳೂರು – ಹೈದರಾಬಾದ್ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ತಿಂಗಳಾಂತ್ಯದಿಂದ ಓಡಾಟ ನಡೆಸಲಿದೆ. ಈ ರೈಲು ರಾಜ್ಯ ರಾಜಧಾನಿ ಬೆಂಗಳೂರು ಬಿಟ್ಟರೆ, ಬೇರೆ ಯಾವುದೇ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಹೇಳಲಾಗಿತ್ತು. ಸದ್ಯ, ವಿವಿಧ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಈ ರೈಲು ಕಲಬುರಗಿಯ ಸೇಡಂ ಹಾಗೂ ರಾಯಚೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎನ್ನಲಾಗಿದೆ. ಇದರೊಟ್ಟಿಗೆ ಆಂಧ್ರ ಪ್ರದೇಶದ ಗುಂತಕಲ್ ಜಂಕ್ಷನ್‌ನಲ್ಲಿಯೂ ನಿಲ್ಲಬಹುದು ಎನ್ನಲಾಗಿದೆ.
ಬೆಂಗಳೂರು ಹೈದರಾಬಾದ್ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಬೇಗನೇ ನಿಗದಿತ ಗುರಿಯನ್ನು ತಲುಪಲಿದೆ. ಇವೆರೆಡು ನಗರ ನಡುವೆ 618 ಕಿಲೋಮೀಟರ್ ದೂರವನ್ನು ಕ್ರಮಿಸಲು ಸಾಮಾನ್ಯ ರೈಲುಗಳು, 11 – 12 ಗಂಟೆ ತೆಗೆದುಕೊಂಡರೇ, ವಂದೇ ಭಾರತ್ ಕೇವಲ 7 – 8 ಗಂಟೆಗಳಲ್ಲಿ ತಲುಪಲಿದೆ.
![]() |
![]() |
![]() |
![]() |
![]() |
[ays_poll id=3]