This is the title of the web page
This is the title of the web page
Crime NewsVideo News

ಎಫ್.ಡಿ.ಎ ಪರೀಕ್ಷೆಯಲ್ಲಿ ಬ್ಲೂಟುತ್ ಬಳಕೆ : ಅಭ್ಯರ್ಥಿ ಬಂಧನ


ಕಲಬುರಗಿ : ಪಿಎಸ್‌ಐ ಪರೀಕ್ಷಾ ಹಗರಣ ಮಾಸುವ ಮುನ್ನ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಎಫ್.ಡಿ.ಎ ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ಬಂಧಿಸಿದ ಘಟನೆ ನಡೆದಿದೆ.

ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಆಹಾರ ಮತ್ತು ಕಾರ್ಮಿಕ ಇಲಾಖೆಯ ಎಫ್‌ಡಿಎ ಪರೀಕ್ಷೆಯಲ್ಲಿ, ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರೀಮೂರ್ತಿ ಬಂಧಿಸಲಾಗಿದೆ. ಅರ್‌ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದಲ್ಲಿ ಪಿಎಸ್‌ಐ ಪರೀಕ್ಷಾ ಹಗರಣದ ಪ್ರಮುಖ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕೈವಾಡ ಶಂಕಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಪರೀಕ್ಷೆಯಲ್ಲೂ ಸದ್ದು ಮಾಡಿದೆ ಬ್ಲ್ಯೂಟೂತ್. ಪಿ ಎಸ್ ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೆ ಇ ಎ ಯಲ್ಲು ಸುದ್ದುಮಾಡಿದ್ದು, ಕೆ ಇ ಎ ಪರೀಕ್ಷೆಯಲ್ಲು ಸದ್ದು ಮಾಡ್ತಿದೆ, ಅಕ್ರಮವಾಗಿ, ಬ್ಲೂಟೂತ್ ಬಳಸಿ ಎಕ್ಸಾಮ್ ಬರೆಯುತ್ತಿದ್ದ ಆರೋಪಿ ಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿಯ ಎಸ್ ಬಿ ಕಾಲೇಜ್ ನಲ್ಲಿ ನಡೆಯುತ್ತಿರುವ ಪರಿಕ್ಷೆ. ಎಕ್ಸಾಮ್ ಬರೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಭ್ಯರ್ಥಿ ತ್ರೀಮೂರ್ತಿ ಅನ್ನೋ ಅಭ್ಯರ್ಥಿಯನ್ನು ಮತ್ತು ಹೊರಗಡೆಯಿಂದ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡ್ತಿದ್ದ ಆರೋಪಿ ಕೂಡ ವಶಕ್ಕೆ ಪಡೆಯಲಾಗಿದೆ.


[ays_poll id=3]