
ಸಿರವಾರ : ಚಳ್ಳಕೆರೆ ಬಳಿ ಸಂಭವಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಅಪಘಾತದಲ್ಲಿ ಸಿರವಾರ ತಾಲ್ಲೂಕಿನ ಮೂರು ಪ್ರಯಾಣಿಕರು ಮೃತಪಟ್ಟು, ಮತ್ತಿಬ್ಬರು ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ಈ ಪ್ರಯಾಣಿಕರು ಕವಿತಾಳದಿಂದ ಮಸ್ಕಿ ಮೂಲಕ ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಚಳ್ಳಕೆರೆ ಬಳಿ ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಸಿರವಾರ ತಾಲೂಕಿನ ಕಡ್ಡೋಣಿ ಗ್ರಾಮದ ನರಸಣ್ಣ ಮರಮೇಶ (5), ಮಸ್ಕಿ ತಾಲ್ಲೂಕಿನ ಬಸಾಪುರ ಗ್ರಾಮದ ಮಾಬಮ್ಮ ಹುಸೇನ್ ಸಾಬ್ (35) ಮತ್ತು ಹಾಲಾಪುರದ ರವಿ ವಿರೇಶ (22) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಟ್ಟಣದ ಜುಬೇರಪಾಶಾ (55) ಮತ್ತು ಅವರ ಪುತ್ರಿ ಸಮೋಬರ್ (22) ಅವರಿಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಸ್ ನಲ್ಲಿ ಇದ್ದ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]