This is the title of the web page
This is the title of the web page
Crime Newsinternational News

50 ಕೋಟಿ ಮೌಲ್ಯದ ಕಮೋಡ್ ಕದ್ದಿದ್ದನ್ನು ಒಪ್ಪಿಕೊಂಡ ಕಳ್ಳ : ಅದೆಂತಾ


K2kannadanews.in

50 crores commode : ಇಲ್ಲೊಬ್ಬ ಕಳ್ಳ ತನ್ನ ಬುದ್ಧಿವಂತಿಕೆಯಿಂದ(Intelligence), ಪ್ರದರ್ಶನದ (show) ಸಮಯದಲ್ಲಿ ಸಂಪೂರ್ಣ ಕ್ರಿಯಾತ್ಮಕವಾಗಿ (Functionally) ಶೌಚಾಲಯ(ಕಮೋಡ್)ವನ್ನು ಕಳುವು (Theft) ಮಾಡಿದ್ದಾನೆ. ಇದೇನಪ್ಪ ಅದನ್ನು ಯಾಕೆ ಕಳ್ತನ ಮಾಡ್ದ ಅಂತೀರಾ? ಆದ್ರ ಬೇಲೆ 50 ಕೋಟಿಯಂತೆ. ಅದೆಂಥ ಕಮೋಡ್ ಅಂತೀರ ಈ ಸುದ್ದಿ ಓದಿ.

ಅಮೆರಿಕಾ ಎಂಬ ಹೆಸರಿನ ಈ ಐಷಾರಾಮಿ ಕಮೋಡ್ (commode) ಅನ್ನು ಖ್ಯಾತ ಇಟಾಲಿಯನ್ ಪರಿಕಲ್ಪನಾ ಕಲಾವಿದ ಮೌರಿಜಿಯೊ ಕ್ಯಾಟೆಲಾನ್ ರಚಿಸಿದ್ದರು. ಐತಿಹಾಸಿಕ (hysterical) ಪ್ರಾಮುಖ್ಯತೆಯ ಸ್ಥಳವಾದ ಬ್ಲೆನ್‍ಹೈಮ್ ಅರಮನೆಯು (Blenhyam palace) ಸುದ್ದಿವಾಹಿನಿಯ ಪ್ರಕಾರ ಯುನೈಟೆಡ್ ಕಿಂಗ್‍ಡಮ್‍ನ (United kingdom) ಮಾಜಿ ಪ್ರಧಾನಿ ವಿನ್‍ಸ್ಟನ್ ಚರ್ಚಿಲ್ ಅವರ ಜನ್ಮಸ್ಥಳ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಪುರಾತನ ಮನೆಯಲ್ಲಿ ನಿರ್ಮಿಸಲಾಗಿದ್ದ 50 ಕೋಟಿ (core) ರೂ.ಮೌಲ್ಯದ ಚಿನ್ನದ ಶೌಚಾಲಯವನ್ನು (Golden commode) ಕಳುವು ಮಾಡಿರುವುದಾಗಿ ವ್ಯಕ್ತಿಯೊಬ್ಬ ತಪ್ಪೋಪ್ಪಿಕೊಂಡಿರುವ ಘಟನೆ ಇಂಗ್ಲೇಂಡ್‍ನಲ್ಲಿ (England) ನಡೆದಿದೆ.

ಇಂಗ್ಲೆಂಡ್‍ನ ಆಕ್ಸ್ರ್ಡ್‍ಶೈರ್‍ನ ವುಡ್‍ಸ್ಟಾಕ್‍ನಲ್ಲಿರುವ 300 ವರ್ಷಗಳಷ್ಟು (Years old) ಹಳೆಯದಾದ ದೇಶದ ಮನೆಯಾಗಿರುವ ಬ್ಲೆನ್‍ಹೈಮ್ ಪ್ಯಾಲೇಸ್‍ನಿಂದ 48,00000 ಪೌಂಡ್‍ಗಳ (ರೂ. 50,36,23939) ಘನ ಚಿನ್ನದ ಶೌಚಾಲಯವನ್ನು ಕದ್ದಿರುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದಾರೆ. ವೆಲ್ಲಿಂಗ್‍ಬರೋದ ಜೇಮ್ಸ ಜಿಮ್ಮಿ ಶೀನ್ ಎಂಬಾತ ಆಕ್ಸ್-ರ್ಡ್ ಕ್ರೌನ್ ಕೋರ್ಟ್‍ನಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾನೆ. ಪ್ರದರ್ಶನದ ಸಮಯದಲ್ಲಿ ಸಂಪೂರ್ಣ ಕ್ರಿಯಾತ್ಮಕ ಶೌಚಾಲಯವನ್ನು ಕಳುವು ಮಾಡಲಾಯಿತು, ಇದರಿಂದಾಗಿ ವುಡ್‍ಸ್ಟಾಕ್‍ನಲ್ಲಿರುವ 18ನೇ ಶತಮಾನದ ಅರಮನೆಗೆ ಪ್ರವಾಹ ಮತ್ತು ಹಾನಿಯುಂಟಾಯಿತು ಎಂದು ಸುದ್ದಿ ಔಟ್‍ಲೆಟ್ ತಿಳಿಸಿದೆ.


[ays_poll id=3]