ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ..
![]() |
![]() |
![]() |
![]() |
![]() |
ಲಿಂಗಸುಗೂರು : ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು, ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ ಎಂದು ಇಲ್ಲಿನ ರಾಜಕಾರಣಿಗಳ ವೈಫಲ್ಯವನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಬಹಿರಂಗವಾಗಿ ಒಪ್ಪಿಕೊಂಡರು.
11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಐಟಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇದರ ಜೊತೆಗೆ ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ, ಜಿಲ್ಲೆಯ ನಾಯಕತ್ವದ ವೈಫಲ್ಯದಿಂದ ಐಐಟಿ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಏಮ್ಸ್ ನೀಡಬೇಕೆಂದು ಈಗಾಗಲೆ ಹಲವು ಬಗೆ ಹೋರಾಟಗಳು ನಡೆದಿವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ.
ಆದರೆ ಏಮ್ಸ್ ನೀಡದೇ ಹೋದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಜಿಲ್ಲೆಗೆ ಏಮ್ಸ್ ನೀಡಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಸರ್ಕಾರ ಏಮ್ಸ್ ಬೇರೆ ಕಡೆ ನೀಡಿಲ್ಲ. ಏಮ್ಸ್ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸದಿದ್ದರೆ ಜಿಲ್ಲೆಯ ಲಕ್ಷಾಂತರ ಜನರು ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಪ್ಪಿದರೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧ ಎಂದು ಗುಡುಗಿದರು.
![]() |
![]() |
![]() |
![]() |
![]() |