This is the title of the web page
This is the title of the web page
National NewsVideo News

ಉಚಿತ ಬಸ್‌ ಪ್ರಯಾಣ ಬದುಕು ಬೀದಿಗೆ: ಆಟೋಗೆ ಬೆಂಕಿ ಹಚ್ಚಿ ಕಣ್ಣೀರಿಟ್ಟ ಚಾಲಕ


K2kannadanews.in

FREE BUS SCHEME : ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಬಿಸಿರುವ ಸರಕಾರದ (Government) ಯೋಜನೆಯಿಂದ ಆಟೋ ಹಾಗೂ ಕ್ಯಾಬ್‌ ಚಾಲಕರ ಬದುಕು ದುಸ್ಥರವಾಗಿದೆ. ಈ ಒಂದು ಯೋಜನೆಗೆ (Scheme) ಆ ರಾಜ್ಯದಲ್ಲಿ ಬಾರಿ ವಿರೋಧ (Oppose) ವ್ಯಕ್ತವಾಗುತ್ತಿದೆ.

ಹೌದು ತೆಲಂಗಾಣ (Telangana) ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress) ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ (Free Bus Journey) ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯಿಂದ  ಆಟೋ (Auto) ಹಾಗೂ ಕ್ಯಾಬ್‌ (Cab) ಚಾಲಕರ (Driver)ಬದುಕು ಬೀದಿಗೆ ಬಿದ್ದಿದೆ. ದಿನದ ದುಡಿಮೆ ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ (Economic Problem) ಸಿಲುಕಿದ್ದಾರೆ. ಹೆಂಡತಿ ಮತ್ತು ಮಕ್ಕಳನ್ನು ಸಾಕಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ಚಾಲಕನೋರ್ವ ತನ್ನ ಆಟೋಗೆ ಬೆಂಕಿ ಇಟ್ಟು ಕಣ್ಣೀರು ಸುರಿಸಿದ್ದಾರೆ.

ತೆಲಂಗಾಣ ಡಿಸಿಎಂ ಅಧಿಕೃತ ನಿವಾಸ ಜ್ಯೋತಿರಾವ್ ಫುಲೆ ಪ್ರಜಾ ಭವನದ ಬಳಿ ಆಟೋಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿರುವ ಚಾಲಕ, ಉಚಿತ ಬಸ್‌ ಯೋಜನೆಯಿಂದ ನಮ್ಮ ಜೀವನ ಬರ್ಬಾದ್‌ ಆಗಿದೆ. ಈಗಾಗಲೇ ಸಾಕಷ್ಟು ಆಟೋ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಯೋಜನೆ ನಮ್ಮ ಬದುಕನ್ನೇ ಸರ್ವನಾಶ ಮಾಡುತ್ತಿದೆ. ತಕ್ಷಣ ಈ ಯೋಜನೆ ನಿಲ್ಲಿಸಿ ಎಂದು ಅಂಗಲಾಚಿದ್ದಾನೆ.


[ays_poll id=3]