![]() |
![]() |
![]() |
![]() |
![]() |
ಲಿಂಗಸಗೂರು : ನಗರದ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿದ್ದು ಸಾರ್ವಜನಿಕರು ತನಿಖೆಗೆ ಒತ್ತಾಯಿಸಿದ ಘಟನೆ ಜರುಗಿದೆ. ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರವಲಯದ ಅತ್ತೆ-ಸೊಸೆ ಗುಡ್ಡದ ಹತ್ತಿರವಿರುವ ಬ್ರಿಜ್ ಹತ್ತಿರದಲ್ಲಿ ನವಜಾತ ಹೆಣ್ಣುಶಿಶುವೊಂದು ಶವವಾಗಿ ಪತ್ತೆಯಾಗಿದೆ.
ಶಿಶುನೀರಿಗೆ ಬಿದ್ದು ಎರಡು ಮೂರು ದಿನಗಳಾಗಿರಬಹುದು ಎಂದು ಹೇಳಲಾಗುತ್ತಿದ್ದು ಮಗುವಿನ ದೇಹದ ಭಾಗವನ್ನು ಜಲಚರಗಳು ತಿಂದಿವೆ. ನವಜಾತ ಹೆಣ್ಣು ಶಿಶುವಾಗಿದೆ. ಆಸ್ಪತ್ರೆಯಲ್ಲಿ ಜನಿಸಿದ ಈ ಶಿಶುವನ್ನು ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದು ಹೋಗಿದ್ದಾರೆಯೋ ಅಥವಾ ಬೇರೆ ಕಾರಣವಿದೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.
![]() |
![]() |
![]() |
![]() |
![]() |
[ays_poll id=3]