
K2 ನ್ಯೂಸ್ ಡೆಸ್ಕ್ : AAP ನಾಯಕ, ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್, ಜೈಲಿನಲ್ಲಿ ಸ್ವಿಮ್ಮಿಂಗ್‌ಪೂಲ್ ಬೇಕೆಂದು ಕೇಳಿದ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಆಪ್ ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್, ಜೈಲಿನಲ್ಲಿ ಸ್ವಿಮ್ಮಿಂಗ್‌ಪೂಲ್ ಬೇಕೆಂದು ಕೇಳಿದ್ದಾರೆ ಎಂದು ಇಡಿ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಜೈನ್ ಅವರಿಗೆ ನೀಡಿರುವ ವೈದ್ಯಕೀಯ ಜಾಮೀನು ಅವಧಿ ವಿಸ್ತರಣೆ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಇಡಿ ಅಧಿಕಾರಿಗಳು, ಫಿಸಿಯೋ ಥೆರಪಿ ನಡೆಸಲು ಜೈಲಿನಲ್ಲೇ ಸ್ವಿಮ್ಮಿಂಗ್‌ಪೂಲ್ ಕೊಡಬೇಕೆಂದು ಜೈನ್ ಕೇಳಿದ್ದಾರೆ. ಆದರೆ, ಆ ಸೌಲಭ್ಯಗಳನ್ನೆಲ್ಲ ಒದಗಿಸಲು ಸಾಧ್ಯವಿಲ್ಲ. ಬೇಕಿದ್ದರೆ ವಾರಕ್ಕೆ ಒಂದುಬಾರಿ ಫಿಸಿಯೋಥೆರಪಿಗೆ ವೈದ್ಯರೇ ಕರೆದೊಯ್ಯಲಿ ಎಂದಿದ್ದಾರೆ.
![]() |
![]() |
![]() |
![]() |
![]() |
[ays_poll id=3]