
ರಾಯಚೂರು: ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರು, ಬಾಣಂತಿಯರಿಗೆ ಹಾಲು ನೀಡಲು ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ, ತಾಯಂದಿರಿಗೆ ಮಾತೃಪೂರ್ಣ ಯೋಜನೆಯಡಿ ಸರ್ಕಾರ ಹಾಲಿನ ಪುಡಿ ಪೂರೈಕೆ ಮಾಡುತ್ತಿತ್ತು. ಇದೀಗ ಈ ಒಂದು ಯೋಜನೆಯಲ್ಲಿ ಸಮಸ್ಯೆ ಉಂಟಾಗಿ ಕಳೆದ ಆರು ತಿಂಗಳಿಂದ ಹಾಲಿನ ಪೌಡರ್ ಸ್ಥಗಿತ ಮಾಡಲಾಗಿದೆ.
ಆದರೆ ಕಳೆದ ಡಿಸೆಂಬರ್‌ನಿಂದ ಹಾಲಿನ ಪೌಡರ್ ವಿತರಿಸದೆ ಕೇವಲ ಅಕ್ಕಿ, ಸಕ್ಕರೆ ಮಿಶ್ರಣ ಮಾಡಿದ ಹಿಟ್ಟು ನೀಡಲಾಗುತ್ತಿದೆ. ಮತ್ತೊಂದೆಡೆ ಕೆನೆಭರಿತ ಹಾಲು ನೀಡುತ್ತಿರುವುದರಿಂದ ಅಂಗನವಾಡಿ ಮಕ್ಕಳು ನಿತ್ಯವೂ ಹಾಲು ಕೇಳುತ್ತಿವೆ. ಮಕ್ಕಳಿಗೆ ಹೇಗೊ ಹೇಳಬಹುದು. ಆದರೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈ ಬಗ್ಗೆ ವಿವರಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು. ಹಾಲು ಉತ್ಪಾದಕ ಸಂಘಗಳಲ್ಲಿ ನಿಗಿದಿತ ಪ್ರಮಾಣದ ಹಾಲು ಬಾರದ ಹಿನ್ನೆಲೆ ಹಾಲಿನ ಪೌಡರ್ ವಿತರಣೆಯಾಗುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಕೆಎಂಎಫ್ ಸರಬರಾಜು ಮಾಡುವ ಹಾಲಿನ ಪೌಡರ್ ಬೆಲೆಯಲ್ಲಿ 275 ರಿಂದ 325 ರೂಪಾಯಿ ಏರಿಕೆ ಮಾಡಿದೆ. ಈ ಏರಿಕೆಯ ಬಗ್ಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದ ನಂತರ ಹಾಲಿನ ಪೌಡರ್ ವಿತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕಳೆದ ಡಿಸೆಂಬರ್ ತಿಂಗಳಿನಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಹಾಲಿನ ಕೊರತೆಯಿಂದ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪೌಡರ್ ವಿತರಣೆ ಮಾಡಿಲ್ಲ. ಸರ್ಕಾರ ಈ ಕುರಿತು ಹೊಸ ಯೋಜನೆ ಜಾರಿಗೆ ತರುತ್ತಿದೆ ಎಂದು ನಮ್ಮ ಮೇಲಾಧಿಕಾರಿಗಳು ತಿಳಿಸಿದ್ದಾರೆ ಅಂತಾ ರಾಯಚೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚೇತನ್ ಕುಮಾರ್ ಹೇಳಿದರು.
![]() |
![]() |
![]() |
![]() |
![]() |
[ays_poll id=3]