This is the title of the web page
This is the title of the web page
State News

ರಾಯಚೂರು ಬಿಇಓ ಗೆ ಸಮನ್ಸ್ ಜಾರಿ


ರಾಯಚೂರು : ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಯಚೂರು ಬಿಇಓ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ರಾಯಚೂರು ತಾಲೂಕಿನ ಗಾಣದಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಇರುವಂತಹ ಬೃಹತ್ ಕಾಲುವೆಯಲ್ಲಿ ಬಿಸಿ ಊಟದ ತಟ್ಟೆ ತೊಳೆಯಲು ಮಕ್ಕಳು ಇಳಿದಿದ್ದು ಮತ್ತು ಶಾಲಾ ಆವರಣದಲ್ಲಿರುವ ಬೋರ್ವೆಲ್ ದುರಸ್ತಿಗೆ ಬಂದು ಆರು ತಿಂಗಳಾದರೂ ದುರಸ್ತಿ ಮಾಡಿಸಿದ ಹಿನ್ನೆಲೆಯಲ್ಲಿ ಮಕ್ಕಳು ಕಾಲುವೆಗೆ ಇಳಿದು ತಟ್ಟೆ ತಡೆಯುತ್ತಿದ್ದಾರೆ. ಏನಾದರೂ ಅನಾಹುತವಾದರೆ ಯಾರು ಎಂಬ ಪ್ರಶ್ನೆ ಇಲ್ಲಿ ಪ್ರಶ್ನಿಸಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗಿತ್ತು. ಇದೇ ವಿಚಾರಕ್ಕೆ ಗ್ರಾಮದ ರಾಘವೇಂದ್ರ ಕೆ. ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಒಂದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೊಗ ರಾಯಚೂರು ಬಿ ಇ ಓ ಅವರಿಗೆ ಲಿಖಿತವಾಗಿ ಹಾಗೂ ಸಂಬಂಧಿಸಿದ ಅಗತ್ಯ ದಾಖಲಾಗಳ ಸಲ್ಲಿಸಲು ಖುದ್ದಾಗಿ (29.08.2023) ರಂದು ಹಾಜರಾಗುವಂತೆ ಸೆಕ್ಷನ್ 4(1) (ಎ) ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯ್ದೆ 2005 ಅನ್ವಯ ಎರಡನೆ ಬಾರಿ ಸಮನ್ಸ್ ಜಾರಿ ಮಾಡಿದೆ.


[ays_poll id=3]