This is the title of the web page
This is the title of the web page
Politics News

ಶಕ್ತಿ ಯೋಜನೆ ವಿರುದ್ಧ ಹೋರಾಟ : ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ


ರಾಯಚೂರು : ಖಾಸಗಿ ವಾಹನ ಮಾಲೀಕರು ಅವರ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಶಕ್ತಿಯೋಜನೆ ಬಗ್ಗೆ ಅವರಿಗೆ ವಿರೋಧ, ಅಸಮಧಾನವಿಲ್ಲ. ಅವರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ ಕಡಿಮೆಯಾಗುತ್ತೆ ಅಂತ ಹೋರಾಟ ಮಾಡ್ತಿದ್ದಾರೆ ಎಂದು ರಾಯಚೂರಿನಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಬಸ್ ಗಳು ಬಂದ್ ವಿಚಾರಕ್ಕೆ ಮಾತನಾಡಿದ ಅವರು, ಖಾಸಗಿ ವಾಹನ ಮಾಲೀಕರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ ಕಡಿಮೆಯಾಗುತ್ತೆ ಅಂತ ಹೋರಾಟ ಮಾಡ್ತಿದ್ದಾರೆ. ಸಾಧಕ ಬಾಧಕಗಳನ್ನ
ನೋಡಿ ಸರ್ಕಾರ ತೀರ್ಮಾನ ಮಾಡುತ್ತದೆ.

ಅವರಿಗೆ ತೊಂದರೆ ಕೊಡಬೇಕು ಅನ್ನೋದು ಸರ್ಕಾರಕ್ಕೇನಿಲ್ಲ. ಉಡುಪಿ, ಉತ್ತರಕನ್ನಡ ,ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಓಡಾಡುತ್ತವೆ. ಅವರಿಗೆ ಯಾವ ರೀತಿ ಅನುಕೂಲ ಮಾಡಬೇಕು ಅನ್ನೋದನ್ನ ಸರ್ಕಾರ ತೀರ್ಮಾನ ಮಾಡುತ್ತೆ. ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಶಕ್ತಿ ಯೊಜನೆ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ಒಂದು ಪೈಸೆ ಸಿಗದಂತೆ ಐದು ಗ್ಯಾರೆಂಟಿಗಳನ್ನ ಮಾಡಲಾಗಿದೆ ಎಂದ ಬೋಸರಾಜು ಹೇಳಿದರು.


[ays_poll id=3]