
K2 ನ್ಯೂಸ್ ಡೆಸ್ಕ್: ಟರ್ಕಿ ಮತ್ತು ಸಿರಿಯಾ ಜನರ ಮೇಲೆ ಪ್ರಕೃತಿ ಮಾತೆ ಮುನಿಸಿಕೊಂಡಿದ್ದು, ಒಂದೇ ದಿನ ಮೂರು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ನೆಲ ಸಮವಾದ ಬೃಹತ್ ಕಟ್ಟಡಗಳ ಅಡಿಯಲ್ಲಿ 3,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಮಂದಿ ಕಟ್ಟಡ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಣಾ ತಂಡಗಳು ಹೊರ ತೆಗೆಯುವ ಯತ್ನ ನಡೆಸುತ್ತಿವೆ.
7.8 ತೀವ್ರತೆಯ ಭೂಕಂಪಕ್ಕೆ ಟರ್ಕಿ ನಲುಗಿದೆ. ಜನರು ನಿದ್ರಿಸುತ್ತಿರುವಾಗಲೇ ಈ ಘೋರ ಘಟನೆ ನಡೆದಿದೆ. ಭೂಕಂಪದಿಂದಾಗಿ ಹಲವು ಕಟ್ಟಡಗಳು ನೆಸಮವಾಗಿದ್ದು, ಅದರಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ, ಸಿರಿಯಾದಲ್ಲೂ ಭೂಕಂಪನದ ಅನುಭವವಾಗಿದ್ದು, ಅಲ್ಲಿಯೂ ಸಹ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಟರ್ಕಿಯ ಡಜ್ಸ್ ಪ್ರದೇಶದಲ್ಲಿ 1999ರಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. 1939ರಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 33 ಸಾವಿರ ಮಂದಿ ಸಾವಿಗೀಡಾಗಿದ್ದರು.
![]() |
![]() |
![]() |
![]() |
![]() |
[ays_poll id=3]