
K2 ಕ್ರೈಂ ನ್ಯೂಸ್ : ಆಸ್ತಿ ವಿಚಾರವಾಗಿ ಜಗಳ ನಡೆದು, ಕೊಲೆ ಮಾಡಿರುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ,ಇಲ್ಲೊಬ್ಬ ಮಲತಾಯಿ ಗಂಡನ ಆಸ್ತಿ ತನ್ನ ಮಕ್ಕಳಿಗೆ ಸೇರದೆ, ಗಂಡನ ಇನ್ನೊಬ್ಬ ಹೆಂಡತಿಯ ಮಗಳಿಗೆ ಸೇರುತ್ತದೆ ಎಂದು 5 ತಿಂಗಳ ಹಸುಗೂಸಿಗೆ ಕುಡಿಸುವ ಹಾಲಿನಲ್ಲಿ ವಿಷ ಬೆರೆಸಿ ಕೊಂದ ಘಟನೆ ನಡೆದಿದೆ.
ಇಡೀ ಮಾನವ ಕುಲವೇ ತಲೆ ತಗ್ಗಸುವ ಪೈಶಾಚಿಕ ಕೃತ್ಯಕ್ಕೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟನೆ ನಡೆದಿದೆ. ಇನ್ನು ಸಿದ್ದಪ್ಪ ಚೆಟ್ಟಿಗೇರಿ ಎನ್ನುವ ವ್ಯಕ್ತಿ ಕಳೆದ 11 ವರ್ಷಗಳ ಹಿಂದೆ ಶ್ರೀದೇವಿ ಎನ್ನುವವರನ್ನು ಮದುವೆ ಆಗಿದ್ದರು. ಆದರೆ, ಮಕ್ಕಳಾಗಲಿಲ್ಲವೆಂದು ನಾಲ್ಕು ವರ್ಷಗಳ ಕಾದು ನೋಡಿದ ಗಂಡ ಹಾಗೂ ಗಂಡನ ಮನೆಯವರು ಈಕೆಗೆ ಬಂಜೆ ಪಟ್ಟವನ್ನು ಕಟ್ಟಿದರು. ನಂತರ ಮೊದಲ ಪತ್ನಿ ಇರುವಾಗಲೇ ದೇವಮ್ಮ ಎನ್ನುವ ಯವತಿಯೊಂದಿಗೆ ಇನ್ನೊಂದು ಮದುವೆಯನ್ನೂ ಮಾಡಿದರು. ಇನ್ನು ಗಂಡ ತನ್ನ ಸವತಿಯೊಂದಿಗೆ ಸಂಸಾರ ಮಾಡುವುದನ್ನು ನೋಡಿಕೊಂಡಿರಲಾಗದೇ ಮೊದಲ ಪತ್ನಿ ಶ್ರೀದೇವಿ ತವರು ಮನೆಗೆ ಹೋಗಿ ಸೇರುತ್ತಾಳೆ.
ಸಿದ್ದಪ್ಪನ ಎರಡನೇ ಹೆಂಡತಿಯಾದ ಆರೋಪಿ ದೇವಮ್ಮಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ತವರು ಮನೆಯಿಂದ ಗಂಡನ ಮನೆಗೆ ವಾಪಸ್ ಬಂದ ಮೊದಲ ಹೆಂಡತಿಗೆ 11 ವರ್ಷಗಳ ನಂತರ ಮಕ್ಕಳಾಗಿದ್ದು ಕಳೆದ ಐದು ತಿಂಗಳ ಹಿಂದೆ ಹೆರಿಗೆಯಾಗಿ ಮಗು ಜನಿಸಿತ್ತು. ಆಸ್ತಿ ತನ್ನ ಮಕ್ಕಳಿಗೆ ಬರಬೇಕು ಎಂಬ ದೂರಾಲೋಚನೆಯಿಂದ ಮಗು ಕುಡಿವ ಹಾಲಿನಲ್ಲಿ ಏನಾಗುತ್ತಿದೆ. ವಿಷಬೆರೆತ ಹಾಲು ಕುಡಿದ ನಂತರ ಮಗು ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಇನ್ನು ಮಗುವಿಗೆ ಹಾಲು ಜೀರ್ಣವಾಗಿಲ್ಲವೆಂದು ಬಾಯಿ ಒರೆಸಿ ತಾಯಿ ಸಮಾಧಾನ ಮಾಡಲು ಮುಂದಾಗಿದ್ದಾಳೆ. ಆದರೆ, ಮಗು ಒಂದೇ ಸಮನೆ ಅಳುತ್ತಿತ್ತು. ಹಾಲುಣಿಸಿ 3 ಗಂಟೆಯ ನಂತರ ಮಗುವಿನ ಬಾಯಲ್ಲಿ ನೊರೆ ಬರಲು ಆರಂಭವಾಗಿದೆ. ಅದಾಗಲೇ ಮಗುವಿನ ಇಡೀ ದೇಹಕ್ಕೆ ವಿಷ ಬೆರೆತಿತ್ತು. ನಂತರ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಂಗೀತಾ ಮೃತಪಟ್ಟಿತ್ತು, ಈ ಘಟನೆ ನಡೆದಿದ್ದು ಕಳೆದ ಆಗಸ್ಟ್ 30 ರಂದು.
ನಾನು ಎರಡನೇ ಹೆಂಡತಿ ಆಗಿದ್ದರಿಂದ ಕಾನೂನು ಪ್ರಕಾರ ನನ್ನ ಮಕ್ಕಳಿಗೆ ಗಂಡನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ಭಾವಿಸಿ ಮೊದಲ ಹೆಂಡತಿಯ ಮಗುವನ್ನು ಕೊಲೆ ಮಾಡಿದರೆ ಎಲ್ಲ ಆಸ್ತಿಯೂ ತನ್ನ ಮಕ್ಕಳಿಗೆ ಬರುತ್ತದೆ ಎಂದು ಕುತಂತ್ರ ಮಾಡಿದ್ದಾಳೆ. ಆ ಕಾರಣಕ್ಕೆ ಮಗುವಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ ಎಂದು ಯಾದಗಿರಿ ಜಿಲ್ಲೆಯ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
![]() |
![]() |
![]() |
![]() |
![]() |
[ays_poll id=3]