This is the title of the web page
This is the title of the web page
Crime News

ವಸತಿ ನಿಲಯದಲ್ಲಿ SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ


ಮಸ್ಕಿ : ವಸತಿ ನಿಲಯದಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿನಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಮೀನಗಡ ಗ್ರಾಮದ ವಸತಿ ನಿಲಯದಲ್ಲಿ ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದ ಆರ್‌ಎಂಎಸ್ ಬಾಲಕಿಯರ ವಸತಿ ನಿಲಯದ SSLC ವಿದ್ಯಾರ್ಥಿನಿ ಅಕ್ಷತಾ ಗಂಗಾಧರ (16) ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಲ್ಕರಾಗಿ ಗ್ರಾಮದ ಅಕ್ಷತಾ ಬ್ಲೇಡ್ ಅಥವಾ ಗಾಜಿನ ಬಳೆ ಚೂರು ಬಳಸಿ ಕೈ ಮತ್ತು ಕತ್ತಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ. ಬಾಲಕಿಯ ಚೀರಾಟ ಗಮನಿಸಿದ ವಿದ್ಯಾರ್ಥಿಗಳು ಅಡುಗೆ ಸಹಾಯಕರಿಗೆ ಮಾಹಿತಿ ನೀಡಿದ್ದು ತುರ್ತು ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದರು ಎಂದು ವಸತಿ ನಿಲಯದ ಮೇಲ್ವಿಚಾರಕಿ ಗಂಗಮ್ಮ ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಗೆ ಕವಿತಾಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕವಿತಾಳ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದಿದ್ದರಿಂದ ಪ್ರಾಣಾಪಾಯವಿಲ್ಲ, ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್‌ಗೆ ಕಳುಹಿಸಲಾಗಿದೆ ಎಂದು ಡಾ.ಪ್ರವೀಣಕುಮಾರ ಮಾಹಿತಿ ನೀಡಿದ್ದಾರೆ.


[ays_poll id=3]