This is the title of the web page
This is the title of the web page
State NewsVideo News

ಕಲಬುರ್ಗಿ-ರಾಯಚೂರು -ಬೆಂಗಳೂರು ವಾರದ ವಿಶೇಷ ರೈಲು : ಸಮಯ ಬದಲಾವಣೆ ಇಲ್ಲಿದೆ ಡಿಟೇಲ್ಸ್..

Oplus_131072

K2kannadanews.in

Special train ರಾಯಚೂರು : ಜಿಲ್ಲೆಯ ಜನರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಕಲಬುರಗಿ ಯಿಂದ ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಎಸ್‌ಎಂವಿಬಿ – ಕೆಎಲ್‌ಬಿಜಿ ವೀಕ್ಲಿ ಟ್ರೇನ್ ಇನ್ನು ಮುಂದೆ ವಾರದಲ್ಲಿ ಮೂರು ದಿನಗಳು ಓಡಾಡಿಸಲು ನಿರ್ಧರಿಸಿದೆ.

ಕಳೆದ ಫೆಬ್ರುವರಿ 28ರಂದು ಚಾಲನೆಗೊಂಡಿದ್ದ ಎಸ್‌ಎಂವಿಬಿ-ಕೆಎಲ್‌ಬಿಜಿ ವಾರದ ವಿಶೇಷ ರೈಲು (06589/06590), ಏಪ್ರಿಲ್ 12ರಿಂದ ಅಧಿಕೃತವಾಗಿ ಸಂಚಾರ ಆರಂಭಿಸಿತ್ತು. ಪ್ರಯಾಣಿಕರಿಂದ ವಾರದ ವಿಶೇಷ ರೈಲಿಗೆ ಅಭೂತಪೂರ್ವ ಬೆಂಬಲ ದೊರೆತ್ತಿದ್ದು ಕಂಡು ರೈಲ್ವೆ ಇಲಾಖೆಯು ವಾರದಲ್ಲಿ ಮೂರು ದಿನಗಳನ್ನು ಓಡಿಸಲು ನಿರ್ಧರಿಸಿದೆ. ಈ ಹಿಂದಿ ನಿಗದಿಯಾಗಿದ್ದ ಬೆಂಗಳೂರಿನಿಂದ ಶುಕ್ರವಾರ ಹಾಗೂ ಕಲಬುರಗಿಯಿಂದ ಶನಿವಾರದ ಸಂಚಾರಿಸುತ್ತಿತ್ತು.

ವಾದರಲ್ಲಿ ಮೂರು ಬಾರಿ ಈ ದಿನ ಓಡಾಡುತ್ತೆ :

ಕಲಬುರ್ಗಿಯಿಂದ ಸಂಜೆ 5.10 ಕ್ಕೆ ಹೊರಟು ಮರುದಿನ ಬೆಳಿಗ್ಗೆ 4.15ಕ್ಕೆ ಬೆಂಗಳೂರು ತಲುಪಲಿದೆ.

ಸೋಮವಾರ
ಬುಧವಾರ
ಶನಿವಾರ

ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಿಂದ ರಾತ್ರಿ 11ಕ್ಕೆ ಹೊರಟು ರೈಲು, ಮರುದಿನ ಬೆಳಿಗ್ಗೆ 9.05ಕ್ಕೆ ಕಲಬುರಗಿ ತಲುಪಲಿದೆ.

ಮಂಗಳವಾರ
ಶುಕ್ರವಾರ
ಭಾನುವಾರ

ಹೀಗೆ ವಾರದಲ್ಲಿ ಮೂರು ದಿನಳ ಕಾಲ ರೈಲು ಸಂಚರಿಸಲಿದೆ, ಇದರ ಉಪಯೋಗ ಪ್ರಯಾಣಿಕರು ಪಡೆಯಬೇಕು ಎಂದು ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.


[ays_poll id=3]