This is the title of the web page
This is the title of the web page
Local News

4ನೇ ಅಲೆ ಗಮನದಲ್ಲಿಟ್ಟು ವರ್ಷಾಚರಣೆ ಮಾಡಿ ಎಸ್ಪಿ ಮನವಿ


ರಾಯಚೂರು : ಡಿಸೆಂಬರ್ 31 ರಂದು ರಾಯಚೂರು ಪೊಲೀಸ್ ಸಿಬ್ಬಂದಿಗಳು ರಾತ್ರಿಯಿಡಿ ಗಸ್ತು ಹೊಡೆಯುತ್ತಾರೆ ಯಾವುದೇ ಅಹಿತಕರ ಘಟನೆಗಳು ಜರಗದಂತೆ ಕ್ರಮ ವಹಿಸಲಾಗಿದ್ದು, ಸಾರ್ವಜನಿಕರು ಕೊವಿಡ್ ನಾಲ್ಕನೇ ಅಲೆ ಗಮನದಲ್ಲಿಟ್ಟುಕೊಂಡು ಹೊಸ ವರ್ಷಣೆಗೆ ಮುಂದಾಗಬೇಕು ಎಂದು ರಾಯಚೂರು ಎಸ್ಪಿ ನಿಖಿಲ್.ಬಿ ಮನವಿ ಮಾಡಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಕೋವಿಡ್ 4ನೇ ಅಲೆ ಬಗ್ಗೆ ಗಮನವಿರಲಿ..

ಈಗಾಗಲೇ ದೇಶ ಮತ್ತು ರಾಜ್ಯದಲ್ಲಿ 4ನೇ ಅಲೆಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ, ಹೊಸ ವರ್ಷಾಚರಣೆ ಮಾಡುವಂತಹ ಸಂದರ್ಭದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನವಿಟ್ಟು ಆಚರಣೆಗೆ ಮುಂದಾಗಲು ಸಲಹೆ ನೀಡಿದ್ದಾರೆ. ಅಲ್ಲದೆ ರಾಯಚೂರು ಜಿಲ್ಲೆಯ ಸಾರ್ವಜನಿಕರು ಡಿಸೆಂಬರ್ 31ರಂದು ಹೊಸ ವರ್ಷಚರಣೆಯನ್ನು 12.30ರ ಒಳಗಾಗಿ ಮುಗಿಸಲು ಮನವಿ ಮಾಡಿದ್ದಾರೆ. ಅಂದಿನ ರಾತ್ರಿ ಪೊಲೀಸ್ ಇಲಾಖೆ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು. ಜಿಲ್ಲೆಯಾದ್ಯಂತ ಹೆಚ್ಚಿನ ನಿಗಾ ಇಡುತ್ತ ಗಸ್ತ್ ಹೊಡೆಯುವ ಕೆಲಸ ಮಾಡುತ್ತೇವೆ. ಸಾರ್ವಜನಿಕರು ಕೂಡ ಆಚರಣೆಯ ವೇಳೆ ಶಾಂತಿಯುತವಾಗಿ ಆಚರಣೆ ಮಾಡಲು ಕೋರಿದರು.


[ays_poll id=3]