
ರಾಯಚೂರು : ರಾಯಚೂರು ವಿಭಾಗದ ಸಾರಿಗೆ ಇಲಾಖೆಯ ಬಸ್ಸುಗಳನ್ನು ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಇಂದು ಚಲಿಸುತ್ತದೆ ಬಸ್ಸಿನಲ್ಲಿ ರೇಡಿಯೇಟರ್ ಹೀಟ್ ಆಗಿ ಹೊಗೆ ಕಾಣಿಸಿಕೊಂಡ ಪ್ರಯಾಣಿಕರು ಆತಂಕಗೊಂಡ ಘಟನೆ ನಡೆದಿದೆ.
ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದ ಹಾಗೆ ಹೊಗೆ ಆವರಿಸಿ ಆಂಧ್ರಪ್ರದೇಶದ ಮಾಧಾವರಂ ಬಳಿ ಕೆಟ್ಟುನಿಂತಿದೆ. ರಾಯರ ಆರಾಧನೆ ಹಿನ್ನೆಲೆ ನಿರಂತರವಾಗಿ ಸಂಚರಿಸುತ್ತಿವೆ. ಇಂಜಿನ್ ಹೀಟ್ ಹೆಚ್ಚಾಗಿ ರೇಡಿಯೇಟರ್ ನಿಂದ ಹೊಗೆ ಬಂದಿದೆ. ಬಸ್ ಹಳೆಯದಾಗಿದ್ದು, ನಿರ್ವಹಣೆಯಿಲ್ಲದೆ ಸಮಸ್ಯೆಯಾಗಿದೆ. ಚಾಲಕ ಕೊಡದಲ್ಲಿ ನೀರು ತಂದು ರೇಡಿಯೇಟರ್‌ಗೆ ಸುರಿದಿದ್ದಾರೆ. ಘಟನೆಯಿಂದ ಪ್ರಯಾಣಿಕರು ಕೊಂಚ ಹೊತ್ತು ಆತಂಕಗೊಂಡಿದ್ದು, ಸಾರಿಗೆ ಇಲಾಖೆ ವಿರುದ್ಧ ಹಿಡೀ ಶಾಪ ಹಾಕಿದ್ದಾರೆ.
![]() |
![]() |
![]() |
![]() |
![]() |
[ays_poll id=3]