This is the title of the web page
This is the title of the web page
Crime NewsState News

ಯುಪಿಐ ಬಳಸುವ ಅಂಗಡಿ ಮಾಲೀಕರೇ ಎಚ್ಚರ : ಅಪ್ಡೇಟ್ ಹೆಸರಲ್ಲಿ ಖಾತೆಗೆ ಖನ್ನ..!


K2kannadanews.in

UPI FRAUD CASE : ಅಂಗಡಿ, ಸಣ್ಣ ಹೊಟೆಲ್ ಮತ್ತು ಸಣ್ಣ ವ್ಯಾಪರಸ್ಥರೇ ನೀವು UPI ಸ್ಕ್ಯಾನ್ ಬಾರ್ ಕೋಡ್ ಬಳಿಸ್ತಿದಿರಾ, ಹಾಗಾದ್ರೆ ಹುಷಾರಾಗಿರಿ, ಇಲ್ಲಿ ಹೊಟೆಲ್ (Hotel) ಮಾಲೀಕನಿಗೆ ಯುಪಿಐ (UPI) ಕ್ಯೂ ಆರ್‌ ಕೋಡ್‌ ಸ್ಕ್ಯಾನರ್ (QR Code) ಮುಖಾಂತರ 48 ಸಾವಿರ ರೂ. ಟೋಪಿ ಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ (Bengaluru) ಕಲ್ಯಾಣ ನಗರದ ಮಂಜುನಾಥ ಟಿಫನ್ ಸೆಂಟರ್ (Tifin centre) ಮಾಲೀಕ ಭಾಸ್ಕರ್ ವಂಚನೆಗೆ ಒಳಗಾದ ವ್ಯಕ್ತಿ. ಇಂಥಾ ಒಂದು ವಂಚಕರ ಜಾಲ (Theft team) ರಾಜ್ಯಾದ್ಯಂತ ವ್ಯಾಪಿಸಿದೆ ಎಂಬ ಸುದ್ದಿ ಹರಡಿದೆ. ಏ.4ರ ಮಧ್ಯಾಹ್ನ (After noon)12 ಗಂಟೆಗೆ ಭಾಸ್ಕರ್‌ ಅವರ ಹೊಟೆಲ್ ಗೆ ಅಪರಿಚಿತ ವ್ಯಕ್ತಿಯೊಬ್ಬ (Unknown person) ಬಂದು ನಿಮ್ಮ ಪೇಟಿಎಂ ಸ್ಕ್ಯಾನರ್‌ ಅಪ್‌ಡೇಟ್‌ (Scanner update) ಆಗಿಲ್ಲ ಎಂದು ಹೇಳಿದ್ದಾನೆ. ನಂತರ ಆತ ನಾನು ಅಪ್‌ಡೇಟ್‌ ಮಾಡಿಕೊಡುತ್ತೇನೆ ಎಂದು ಹೇಳಿ ಮೊಬೈಲ್‌ (Mobile) ತೆಗೆದುಕೊಂಡಿದ್ದಾನೆ. ಮೊಬೈಲ್‌ ತೆಗೆದುಕೊಂಡ ಬಳಿಕ ಏನೋ ಮಾಡಿ ಯುಪಿಐ ಮೂಲಕ ಒಂದು ರೂ. ಕಳುಹಿಸಿ ಮಧ್ಯಾಹ್ನ ಸ್ಕ್ಯಾನರ್‌ ಅಪ್‌ಡೇಟ್‌ ಆಗಿದೆ ಎಂದು ಹೇಳಿ ತೆರಳಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆತ ಹೋದ ನಂತರ 18,000 ರೂ. ಮತ್ತು 30,000 ರೂ. ಕಡಿತಗೊಂಡ ಮೆಸೇಜ್‌ (Massage) ಇವರ ಮೊಬೈಲ್‌ ಬಂದಾಗ ತಾನು ಮೋಸ ಹೋದ ವಿಚಾರ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ (Chandra Layout Police Station) ದೂರು ನೀಡಿದ್ದಾರೆ. ಮುಷರಫ್‌ ಖಾನ್‌, ಮೊಹಮ್ಮದ್‌ ಸಿರಾಜ್‌ ಹೆಸರಿನ ಖಾತೆಯಿಂದ (Account) ವಂಚನೆಯಾಗಿದ್ದು ಪೊಲೀಸರು (Police) ತನಿಖೆ ಆರಂಭಿಸಿದ್ದಾರೆ.


[ays_poll id=3]