This is the title of the web page
This is the title of the web page
Crime NewsLocal NewsVideo News

ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾದ ಅಂಗಡಿ..!


K2kannadanews.in

Fire incident ಮಾನ್ವಿ : ಟಿನ್ಶರ್ಟ್ ನಲ್ಲಿ ನಿರ್ಮಿಸಲಾದ ಅಂಗಡಿಯವಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಾಗಲಿ ಸಂಪೂರ್ಣ ಅಂಗಡಿ ಸುಟ್ಟು ಬಸ್ನವಾದ ಘಟನೆ ಮದ್ಲಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.

ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ವಂದೇ ಮಾತರಂ ಕಮ್ಯೂನಿಕೇಶನ್ ಅಂಗಡಿಗೆ ತಡರಾತ್ರಿ 2:20 ಕ್ಕೆ ತಗುಲಿದ ಬೆಂಕಿಗೆ ಲಕ್ಷಾಂತರ ಬೆಲೆ ಬಾಳುವ ಸಾಮಾಗ್ರಿ ಸುಟ್ಟು ಕರಕಲಾಗಿವೆ. ಡಬ್ಬಿಯ ಒಳಗಿನ ಬೆಂಕಿ ಹೊರ ಕಾಣಲಾರದೆ ಸುಡುವಾಗ ಶಬ್ದದಿಂದ ಅಕ್ಕ ಪಕ್ಕದ ಜನ ದಾವಿಸಿ ನೋಡಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಮಾಹಿತಿ ತಿಳಿದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಯಶಸ್ವಿಯಾಗಿದ್ದಾರೆ.

 

ಅಂಗಡಿಯಲ್ಲಿದ್ದ 1 ಪ್ರೀಜ್, 2 ಲ್ಯಾಪ್ ಟಾಪ್, 2 ಪ್ರೀಂಟರ್ಸ್, 2 ಝರಾಕ್ಸ್ ಮಷಿನ್, 2 ಕಂಪ್ಯೂಟರ್, 1 ಪೋಟೋ ಪ್ರೀಂಟ್, ಲ್ಯಾಮಿನೇಶನ್, ಹೋಮ್ ಟೇಟರ್, 20 ಮೊಬೈಲ್, 30 ರಿಪೇರಿ ಮೊಬೈಲ್ಸ್, ಹೊಸ ಮೊಬೈಲ್ ಐಟಮ್ಸ್, ಮೊಬೈಲ್ ರಿಪೇರಿ ಮಷೀನ್ಸ್, ಹೊಸ ಫರ್ನಿಚರ್, 43000 ರೂ ನೋಟುಗಳು, ಡಾಕುಮೇಂಟ್ಸ್, ಬಕ್ ಸ್ಟಾಲ್ ಸಾಮಾಗ್ರಿಗಳು, ಸೇರಿ ಒಟ್ಟು 5 ಲಕ್ಷ ನಷ್ಟ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ ಎಂದು ಮಾಲಿಕರಾದ ಮಹಮ್ಮದ್ ಹುಸೇನ್ ಸಾಬ್ ಮತ್ತು ಮಹಿಬೂಬ್ ಮದ್ಲಾಪುರ ಅಳಲು ತೊಡಿಕೊಂಡರು.


[ays_poll id=3]