
ರಾಯಚೂರು : ಮಹಾಶಿವರಾತ್ರಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರುದ್ರದೇವನಿಗೆ ವಿಶೇಷ ರುದ್ರಭಿಷೇಕ ಪೂಜೆಮಾಡಿ ಶಿವರಾತ್ರಿ ಆಚರಣೆಗೆ ಚಾಲನೆ ನೀಡಲಾಯಿತು.
ಹೌದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇರುವಂತಹ, ರುದ್ರದೇವನ ಶಿವಲಿಂಗಕ್ಕೆ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥರು ವಿಶೇಷವಾಗಿ ರುದ್ರಾಭಿಷೇಕ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ಈ ವೇಳೆ ಮಠದ ಪಾಠಶಾಲಾ ಅರ್ಚಕರು ಮತ್ತು ವಿದ್ಯಾರ್ಥಿಗಳು ವಿವಿಧ ಮಂತ್ರಗಳನ್ನು ಪಠಣೆ ಮಾಡುವ ಮೂಲಕ ಪೂಜೆಗೆ ಮತ್ತಷ್ಟು ಮೆರಗು ತಂದರು. ಈ ವೇಳೆ ನೂರಾರು ಜನ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾದರು.
![]() |
![]() |
![]() |
![]() |
![]() |
[ays_poll id=3]