This is the title of the web page
This is the title of the web page
Local NewsVideo News

ಬಸ್ ತಡೆದು ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ..


K2kannadanews.in

Students strike ರಾಯಚೂರು : ಪ್ರತಿನಿತ್ಯ ಸಮಯಕ್ಕೆ(In time) ಸರಿಯಾಗಿ ಬಸ್ (Bus) ಬಾರದೆ ಇರುವ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳು ಶಾಲಾ (School), ಕಾಲೇಜಿಗೆ (College) ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಇಂದು ಬಸ್ ತಡೆದು ಪ್ರತಿಭಟನೆ (Protests) ಮಾಡಿ‌ ಅಸಮಧಾನ ವ್ಯಕ್ತಪಡಿಸಿದ ಘಟನೆ ಬೈಲಗುಡ್ಡ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ(Maski) ತಾಲೂಕಿನ ಬೈಲಗುಡ್ಡ ಗ್ರಾಮದಲ್ಲಿ ಘಟನೆ ನಡೆದಿದ್ದು. ಸಾರಿಗೆ ಇಲಾಖೆ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿಗಳು (Students) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀರ್ಥಬಾಯಿ ಹಾಗೂ ಬೈಲಗುಡ್ಡ ಗ್ರಾಮದಿಂದ ಮಸ್ಕಿಗೆ ಸುಮಾರು 60 ವಿದ್ಯಾರ್ಥಿಗಳು, ಈ ಎರಡು ಗ್ರಾಮದಿಂದ ಮಸ್ಕಿ ಪಟ್ಟಣದ ಶಾಲೆ, ಕಾಲೇಜುಗಳಿಗೆ ಆಗಮಿಸುತ್ತಾರೆ. ಇಂದು ಕೂಡ ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಇರುವ ಹಿನ್ನಲೆ ಪರೀಕ್ಷೆಗೆ ಗೈರಾಗಿದ್ದಾರೆ. ಬಸ್ ತಡವಾಗಿ ಬಂದ ಹಿನ್ನಲೆ ಪಿಯುಸಿ (PUC) ಮತ್ತು ಒಂಬತ್ತನೇ ತರಗತಿ (9 STD) ವಿದ್ಯಾರ್ಥಿಗಳು ಪೂರ್ವ ಸಿದ್ದತಾ (Proprietary exam) ಪರೀಕ್ಷೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ಸ್ ತಡೆದು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ.


[ays_poll id=3]