This is the title of the web page
This is the title of the web page
Crime NewsLocal News

ಸ್ಯಾಂಟ್ರೋ ರವಿ ಆರೆಸ್ಟ್


ರಾಯಚೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್. ಮಂಜುನಾಥ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಲೆಮಾರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸಲು ರಾಯಚೂರು ಎಸ್‌ಪಿ ನಿಖಿಲ್.ಬಿ ಅವರು ಮೂಲ ಕಾರಣವಾಗಿದ್ದರೆ.

ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರೊದಕ್ಕೆ ಲೀಡ್ ಸಿಕ್ಕಿದ್ದೆ ರಾಯಚೂರು ಪೊಲೀಸರಿಂದ. ಸ್ಯಾಂಟ್ರೋ ರವಿ ಅತ್ಯಾಪ್ತ ಹಾಗೂ ವಕೀಲ ಲಷ್ಮೀತ್ ಚೇತನ್ ಎಂಬುವವ ಮಂತ್ರಾಲಯಕ್ಕೆ ಬಂದಿದ್ದ, ಇದನ್ನು ಖಚಿತ ಪಡಿಸಿಕೊಂಡ ರಾಯಚೂರು ಪೊಲೀಸರು ಈತನನ್ನು ಬಂಧಿಸಿದ್ದರು.

ಈತನೇ ಸ್ಯಾಂಟ್ರೋ ರವಿ ಗೆ ಜಾಮೀನಿಗೆ ಅರ್ಜಿ ಹಾಕಿದ್ದ. ಈತ ನಿನ್ನೆ ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಾಗ ರಾಯಚೂರು ಪೊಲೀಸರು ಲಾಕ್ ಮಾಡಿದ್ದರು. ರಾಯಚೂರು ಎಸ್‌ಪಿ ನಿಖಿಲ್.ಬಿ ಅವರು ಆಪರೇಶನ್ ಮಾಡಿ, ಲಷ್ಮೀತ್ ಅಲಿಯಾಸ್ ಚೇತನ್ ವಶಕ್ಕೆ ಪಡೆದು, ಅಸಲಿ ಸತ್ಯವನ್ನು ಬಯಲು ಮಾಡಿದ್ದರು.

ಪೊಲೀಸರು ಕೂಡಲೇ ಆತನಿಂದ ಸ್ಯಾಂಟ್ರೋ ರವಿ ಮಾಹಿತಿ ಕಲೆ ನಂತರ ಆತನನ್ನ ಮೈಸೂರಿಗೆ ಕರೆದೊಯ್ದಿದ್ದರು. ಪೊಲೀಸರ ಕಣ್ತಪ್ಪಿಸಿ ಮಂತ್ರಾಲಯಕ್ಕೆ ಬಂದು ಹೋಗಿರೋ ಸ್ಯಾಂಟ್ರೋ ರವಿ, ಮೊಬೈಲ್‌ಫೋನ್ ಸ್ವಿಚ್ ಆಫ್ ಮಾಡಿಕೊಂಡು ಗೌಪ್ಯವಾಗಿ ರಾಯರ ದರ್ಶನ ಪಡೆದು, ರಾತ್ರಿ ಮಂತ್ರಾಲಯದಲ್ಲೇ ವಾಸ್ತವ್ಯ ಮಾಡಿದ್ದ ಎನ್ನಲಾಗುತ್ತಿದೆ. ಪೊಲೀಸರ ಶೋಧ ತೀವ್ರವಾಗಿರುವುದನ್ನು ಅರಿತು ಮಂತ್ರಾಲಯದಿಂದ ಕಾಲ್ಕಿತ್ತಿದ್ದ ಸ್ಯಾಂಟೋ ರವಿ, ಇದಾದ ಬಳಿಕವೇ ಸ್ಯಾಂಟ್ರೋ ರವಿ ಬಗ್ಗೆ ಖಚಿತ ಮಾಹಿತಿಯನ್ನ ರಿವೀಲ್ ಮಾಡಿ. ಆ ನಂತರ ಸ್ಯಾಂಟ್ರೋ ರವಿಯನ್ನ ಗುಜರಾತ್ ನಲ್ಲಿ ಬಂಧಿಸಲಾಗಿದೆ.


[ays_poll id=3]