
ಮಾನ್ವಿ : ಅಕ್ರಮ ಮರುಗಾರಿಕೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗಣಿ ವಿಜ್ಞಾನಿ ಇಲಾಖೆ ಅಧಿಕಾರಿಗಳು ದಾಳಿ ಹಿನ್ನೆಲೆಯಲ್ಲಿ ಮರಳು ದಂಧೆ ಕೋರರು ಅಧಿಕಾರಿಗಳ ಮುಂದೆಯೇ ಮಾಜಿ ಯೋಧ ಖನಿಜ ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಎಂದು ನಡೆದಿದೆ.
ರಾಯಚೂರು ಜಿಲ್ಲೆಯಲ್ಲಿ ವಿವಿಧೆಡೆ ಅಕ್ರಮ ಮರಳುಗಾರಿಕೆ ದಂಧೆ ಹೆಗ್ಗಿಲ್ಲದೆ ನಡೆಯುತ್ತದೆ.ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕಲರ್ಪವಿ ಕ್ಯಾಂಪ್ ಸುತ್ತಮುತ್ತ ದಾಳಿ ಖಚಿತ ಮಾಹಿತಿ ಮೇರೆಗೆ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಮೈನಿಂಗ್ ಅಧಿಕಾರಿಗಳು ಖನಿಜ ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಕ್ರಮ ಮರಳುಗಾರಿಕೆಗೆ ಬಳಸಿದ ಟಿಪ್ಪರ್ ಮತ್ತು ಜೆಸಿಬಿ ಜಪ್ತಿ ಮಾಡಿದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ತಂಡ ಅಲ್ಲಿಂದ ವಾಹನ ತೆಗೆದುಕೊಂಡು ಮಾನ್ವಿ ಠಾಣೆಗೆ ಹೊರಟಿದ್ದ ವೇಳೆ ಏಕಾಏಕಿ ಐದು- ಆರು ಜನರು ಒಟ್ಟಿಗೆ ಬಂದು ಕಬ್ಬಿಣದ ರಾಡ್ ನಿಂದ ಮೈನಿಂಗ್ ತಂಡದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ದಾಳಿ ವೇಳೆ ಮೈನಿಂಗ್ ಇಲಾಖೆಯ ರಕ್ಷಣಾ ಸಿಬ್ಬಂದಿ ನೀಲಪ್ಪ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಜೆಸಿಬಿ ಚಾಲಕ ಶಿವಕುಮಾರ್, ವೆಂಕಟೇಶ ಸೇರಿ 6 ಜನರ ವಿರುದ್ದ ಪ್ರಕರಣ ದಾಖಲು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ ಹೇಳಿದರು. ಒಟ್ಟಾರೆಯಾಗಿ ಅಕ್ರಮ ಮರಳು ದಂಧೆ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಅಧಿಕಾರಿಗಳು ಇದೀಗ ಅಕ್ರಮ ಮರಳು ಅಡ್ಡಗಳ ಮೇಲೆ ದಾಳಿ ಮಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಇತ್ತ ಗಮನಹರಿಸಿ ಕಠಿಣ ಕ್ರಮಕ್ಕೆ ಮುಂದಾಗ ಬೇಕಿದೆ.
![]() |
![]() |
![]() |
![]() |
![]() |
[ays_poll id=3]