
ರಾಯಚೂರು : ರಾಯಚೂರು ಶಾಖೋತ್ಪನ್ನ ಕೇಂದ್ರದ ನಾಲ್ಕು ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು ಒಟ್ಟು ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. 1720 ಮೆ.ವ್ಯಾವಿದ್ಯುತ್ ಉತ್ಪಾದನೆಯಲ್ಲಿ 430 ಮೆ.ವ್ಯಾ. ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.
ರಾಯಚೂರಿನ ಆರ್ ಟಿಪಿಎಸ್ ಕೇಂದ್ರದ 8 ಘಟಕಗಳ ಪೈಕಿ, ಒಂದರಲ್ಲಿ ಕಲ್ಲಿದ್ದಲು ಸಾಗಾಣೆ ಬಂಕರ್ ಕುಸಿದು ಸ್ಥಗಿತಗೊಂಡು ಒಂದು ವರ್ಷವೇ ಕಳೆದಿದೆ. ಇನ್ನೂ ಮೂರು ಮತ್ತು ಆರರರ್ಲಿ ಬಾಯ್ಲರ್ ಟ್ಯೂಬ್ ಸೋರಿಕೆಯಿಂದ ಸ್ಥಗಿತಗೊಂಡಿವೆ. ಮತ್ತೆರಡು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿವೆ. ಈ ಪರಿಣಾಮವಾಗಿ 1,720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬೇಕಿದ್ದ ಆರ್ ಟಿಪಿಎಸ್ ಕೇಂದ್ರದಲ್ಲಿ ಕೇವಲ ಪ್ರಸ್ತುತ 447 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
- ಬಿಟಿಪಿಎಸ್ ನ ಮೂರು ಘಟಕಗಳಿಂದ 1,119 ಮೆವಾ, ವೈಟಿಪಿಎಸ್ ನ ಎರಡು ಘಟಕಗಳೆಗ 985 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದ್ರೇ ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠ 12,010 ಮೆವಾ ಇದ್ದು, ಮುಂಗಾರು ಕೊಕೈಟ್ಟ ಕಾರಣ, ಜಲಾಶಯಗಳಲ್ಲಿ ನೀರಿಲ್ಲದೇ ಅಲ್ಲೂ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪೂರೈಕೆಗೆ ಸಮಸ್ಯೆ ಎದುರಾಗಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ.
![]() |
![]() |
![]() |
![]() |
![]() |
[ays_poll id=3]