This is the title of the web page
This is the title of the web page
Politics NewsState NewsVideo News

ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಿವೃತ್ತ ಐಎಎಸ್ ಅಧಿಕಾರಿ..


K2kannadanews.in

Political News ರಾಯಚೂರು : ದೇಶದಲ್ಲಿ ಲೋಕಸಭಾ ಚುನಾವಣೆಯ (Election of MPs) ಕಾವು ಏರತೊಡಗಿದೆ . ಆಕಾಂಕ್ಷಿ (aspirant) ಅಭ್ಯರ್ಥಿಗಳ ಪಟ್ಟಿಯು (List) ಏರುತ್ತಿದೆ. ಇದೀಗ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಿವೃತ್ತ ಐಎಎಸ್ (Retired IAS) ಅಧಿಕಾರಿ ಜಿ.ಕುಮಾರ್ ನಾಯಕ್.

ಹೌದು ರಾಯಚೂರು (Raichur) ಲೋಕಸಭೆ ಕ್ಷೇತ್ರದ ಆಕಾಂಕ್ಷಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿ. ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡುತ್ತಾ, ಸಮಾಜ ಸೇವೆಗಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎನ್ನುತ್ತಾರೆ ಜಿ.ಕುಮಾರ್ ನಾಯಕ್ (G.Kumar nayak). ಇನ್ನು ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹಿರಂಗವಾಗಿ ಹೇಳದಿದ್ದರೂ ಕಾಂಗ್ರೆಸ್ (Congrats) ಪಕ್ಷದ ಆಕಾಂಕ್ಷಿಯಾಗಿದ್ದಾರೆ ಕುಮಾರ್ ನಾಯಕ್‌.

ಕ್ಷೇತ್ರದಲ್ಲಿ ಈಗಾಗಲೇ ಹಲವು ಕಾಂಗ್ರೆಸ್ ಮುಖಂಡರನ್ನು (Meet leader’s) ಭೇಟಿ ಮಾಡಿರುವ ಕುಮಾರ್ ನಾಯಕ್ ಅವರು, ರಾಯಚೂರು ಜಿಲ್ಲೆಯಲ್ಲಿ ಹಿಂದೆ ಮೂರು ವರ್ಷಗಳ ಕಾಲ ಜಿಲ್ಲಾಧಿಕಾರಿ (Work as DC) ಆಗಿದ್ದರು. 8 ವರ್ಷಗಳ ಕಾಲ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿಯೂ ಕೆಲಸ ನಿರ್ವಹಿಸಿದ್ದಾರೆ. 7 ವರ್ಷಗಳ ಕಾಲ RTPS ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.


[ays_poll id=3]