This is the title of the web page
This is the title of the web page
National NewsVideo News

ರಾಮಾಯಣ ನಾಟಕ ಪ್ರದರ್ಶನ : ಧಾರ್ಮಿಕ ಭಾವನೆಗಳಿಗೆ ಧಕ್ಕೆ..!


K2kannadanews.in

Ramayan darshanam : ರಾಮಾಯಣದ ಕುರಿತ ನಾಟಕ (Drama) ಪ್ರದರ್ಶನದ ವೇಳೆ ಹಿಂದೂ (Hindu) ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ (Harm to religious sentiments) ತಂದ ಆರೋಪದ ಮೇಲೆ ಸಾವಿತ್ರಿಬಾಯಿ (savitribayi pule) ಫುಲೆ ಪುಣೆ ವಿಶ್ವವಿದ್ಯಾಲಯದ (Pune university) ಪ್ರೊಫೆಸರ್ ಮತ್ತು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ರಾಮಾಯಣದ ಕುರಿತ ನಾಟಕ (Ramleela) ಪ್ರದರ್ಶನವಾಗಿತ್ತು. ಈ ವೇಳೆ ಸೀತೆಯ (Seeta) ಪಾತ್ರಧಾರಿಯು ಧೂಮಪಾನ (smoking) ಮಾಡುವುದು ಸೇರಿ ಹಲವು ಆಕ್ಷೇಪಾರ್ಹ ದೃಶ್ಯಗಳು ಜೊತೆಗೆ ಪಾತ್ರಾಧಾರಿಗಳು ನಿಂದನೀಯ ಭಾಷೆಗಳನ್ನು ಬಳಸಿದ್ದಾರೆ.

ಘಟನೆಗೆ ಸಂಬಂಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದ್ದಾರೆ. ಹಿಂದು ದೇವತೆಗಳಿಗೆ ನಾಟಕದ ಹೆಸರಿನಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿವಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಎಬಿವಿಪಿ ಪುಣೆ ನಗರ (Pune city) ಅಧ್ಯಕ್ಷ ಹರ್ಷವರ್ಧನ್‌ ಹರ್ಪುಡೆ ಅವರು ಚತುರ್‌ಶ್ರಿಂಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಿಯ ಸೆಂಟರ್‌ ಫಾರ್‌ ಪರ್ಫಾಮಿಂಗ್‌ ಆರ್ಟ್ಸ್‌ ವಿಭಾಗದ ನಿರ್ದೇಶಕ ಡಾ. ಪ್ರವೀಣ್‌ ಭೋಲೆ, ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು, ಬರಹಗಾರ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ.


[ays_poll id=3]