This is the title of the web page
This is the title of the web page
Politics NewsVideo News

ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಕುಮಾರ್ ನಾಯಕ್


K2kannadanews.in

Election News ರಾಯಚೂರು : ಸಾಕಷ್ಟು ಕುತೂಹಲ ಕೆರಳಿಸಿದ್ದ, ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಪಟ್ಟಿ ಹೊರ ಬಿದ್ದಿದೆ. ನಿವೃತ್ತ ಐಎಎಸ್ ಅಧಿಕಾರಿ ಜಿ ಕುಮಾರ್ ನಾಯಕ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ಹೌದು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಾದರೂ ಕೂಡ ಅಭ್ಯರ್ಥಿಗಳನ್ನ ಘೋಷಣೆ ಮಾಡಿರಲಿಲ್ಲ, ಇದೀಗ ಕಾಂಗ್ರೆಸ್ ಪಕ್ಷವು ತನ್ನ ಎರಡನೇ ಪಟ್ಟಿಯಲ್ಲಿ, ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಅವರನ್ನ ಅಂತಿಮಗೊಳಿಸಿ ಘೋಷಣೆ ಮಾಡಿದೆ.

ಈ ಹಿಂದೆ 1999 ರಿಂದ 2002ರ ವರೆಗೆ ಜಿಲ್ಲಾಧಿಕಾರಿಯಾಗಿ,‌ ರಾಯಚೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ, KPCL (RTPS) ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಈ ಭಾಗಕ್ಕೆ ಪರಿಚಿತರಾಗಿರುವ ಜಿ.ಕುಮಾರ್ ನಾಯಕ್ ಅವರು ಜಿಲ್ಲೆಯ ಒಂದಷ್ಟು ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದಾರೆ. ಇನ್ನೂ ಕಣದಲ್ಲಿ ರವಿ ಪಾಟೀಲ್ ಅವರು ಆಕಾಂಕ್ಷಿಯಾಗಿದ್ದರು.

 


[ays_poll id=3]