This is the title of the web page
This is the title of the web page
National NewsVideo News

ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ..?


K2kannadanews.in

Viral News : ಕಳ್ಳತನ (Theft) ಮಾಡುವುದು ಅಪರಾಧ (Crime) ಅಂತ ಗೊತ್ತಿದ್ರೂ ಕೂಡಾ ಕೆಲವೊಬ್ಬರು ಕಳ್ಳತನವನ್ನೇ ತಮ್ಮ ವೃತ್ತಿಯನ್ನು (Job) ಮಾಡಿಕೊಂಡಿರುತ್ತಾರೆ. ದುಡಿಯುವ ಬದಲಿಗೆ ರೈಲಿನಲ್ಲಿ (Train) ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ (Public place) ಕಳ್ಳತನ ಮಾಡುತ್ತಿರುತ್ತಾರೆ. ಇದೇ ರೀತಿ ಇಲ್ಲೊಬ್ಬ ಕಳ್ಳ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯೊಬ್ಬರ ಮೊಬೈಲ್ ಫೋನ್ ಕದ್ದು, ಪರಾರಿಯಾಗಲು ಯತ್ನಿಸಿದ ವೇಳೆ ಸಿಕ್ಕ ಶಿಕ್ಷೆ ಯಾರಿಗೂ ಬೇಡ.‌

ಕಳ್ಳತನಕ್ಕೆ ಮುಂದಾದಗ ಆತನ ನಸೀಬು ಕೆಟ್ಟು, ರೆಡ್ ಹ್ಯಾಂಡ್ (Red hand) ಆಗಿ ಸಿಕ್ಕಿಹಾಕಿಕೊಂಡಿದ್ದು, ಇನ್ನು ಈ ಜನ್ಮದಲ್ಲಿ ಆತ ಕಳ್ಳತನಕ್ಕೆ ಕೈ ಹಾಕದಂತೆ, ಪ್ರಯಾಣಿಕರೆಲ್ಲರೂ (Passengers) ಸೇರಿ ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ವರದಿಗಳ ಪ್ರಕಾರ ಈ ಘಟನೆ ಬಿಹಾರದ (Bihar) ಭಾಗಲ್ಪುರದಲ್ಲಿ ನಡೆದಿದ್ದು, ವೈರಲ್ ವಿಡಿಯೋದಲ್ಲಿ ಪ್ರಯಾಣಿಕರು ಕಿಟಕಿಯ (window) ಮೂಲಕ ಕಳ್ಳನ ಕೈಯನ್ನು ಹಿಡಿದುಕೊಂಡು ಆತನನ್ನು ನೇತಾಡಿಸಿಕೊಂಡು ಹೋಗಿದ್ದಾರೆ, ಅಷ್ಟೇ ಅಲ್ಲದೆ ಇನ್ನು ಮುಂದೆ ಕಳ್ಳತನ ಮಾಡ್ತೀಯಾ ಅಂತ ತಲೆ ಸರಿಯಾಗಿ ಏಟನ್ನು ಸಹ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ರೈಲಿನ ಹೊರಭಾಗದಲ್ಲಿ ನೇತಾಡುತ್ತಿದ್ದ ಕಳ್ಳ ಭಯದಿಂದ ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನನ್ಗೆ ಸತ್ತು ಹೋದಂತಾಗುತ್ತಿದೆ ಅಂತ ಗೋಗರೆಯುತ್ತಿರುವ ದೃಶ್ಯವನ್ನು ಕಾಣಬಹುದು.


[ays_poll id=3]