
ರಾಯಚೂರು : ಗ್ರಾಮ ಪಂಚಾಯತಿಯ ಕಾಯ್ದೆ ಬದ್ಧ ಮತ್ತು ಸಂವಿಧಾನ ಬದ್ಧ ಅಧಿಕಾರದ ಮೂಲಕ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಯಚೂರು ತಾಲ್ಲೂಕ ಗ್ರಾಮ ಪಂಚಾಯತ ಸದಸ್ಯರು ಒಕ್ಕೂಟ ನಗರದ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು.
ಎನ್.ಆರ್.ಇ.ಜಿ. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅನುಷ್ಟಾನಗೊಳಿಸುವ ಮೂಲಭೂತ ಸೌಲಭ್ಯ ಕಾಮಗಾರಿಗಳಾದ ಅಂಗನವಾಡಿ ಕಟ್ಟಡ, ಸಿ.ಸಿ. ರಸ್ತೆ, ಶಾಲಾ ಕಂಪೌಂಡ್, ಚರಂಡಿ, ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ಕೂಲಿ ಹಣ ಶೇ20% ಮತ್ತು ಸಾಮಾಗ್ರಿ ವೆಚ್ಚ ಶೇ80% ರ ಅನುಪಾತದಲ್ಲಿ ಜಾರಿಗೊಳಿಸಬೇಕು.ಗ್ರಾಮ ಸಭೆಯಲ್ಲಿ ನಿರ್ಣಯಿಸಿದ ಕಾಮಗಾರಿಗಳಿಗೆ ತಡೆ ನೀಡಬಾರದು.
ಗ್ರಾಮ ಪಂಚಾಯತಿಯಲ್ಲಿ ಅನುಮೋದಿಸಿದ
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಸಿಬ್ಬಂದಿ ಆಯ್ಕೆ ಅಧಿಕಾರವನ್ನು ಪಂಚಾಯತಿಗೆ ನೀಡಬೇಕು.ಬಿಸಿಯೂಟ ಸಿಬ್ಬಂದಿ ಆಯ್ಕೆಯನ್ನು ವಿಳಂಬ ಮಾಡದೆ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ಬಳಕೆಗೆ ನಿರ್ಭಂದ ಹೇರಿ ಎಸ್ಕೋಗೆ (ವಿದ್ಯುತ್) ಗೆ ಶೇ25, ಎಸ್.ಸಿ. ಮತ್ತು ಎಸ್.ಟಿ. ಗಳಿಗೆ ಶೇ25 , ಜಲಜೀವನ ಮಿಷನ್‌ಗೆ ಶೇ15, ಸಿಬ್ಬಂದಿ ವೇತನ ಪಾವತಿಗೆ ಶೇ15 ಅಂಗವಿಕಲರಿಗೆ ಶೇ3 ರಷ್ಟು ಸೇರಿದಂತೆ ಒಟ್ಟು 82 ನಿಭರ್ಂದ ಹೇರಿ ಉಳಿದ ಶೇ17 ಅನುದಾನವನ್ನು ಆಡಳಿತ ವೆಚ್ಚಕ್ಕೆ ಬಳಸುವುದರಿಂದ,ಗ್ರಾಮ ಪಂಚಾಯತಿಯಿಂದ ಯಾವುದೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ,ನಿರ್ಭಂದವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
![]() |
![]() |
![]() |
![]() |
![]() |
[ays_poll id=3]