This is the title of the web page
This is the title of the web page
State NewsVideo News

ಅಕ್ರಮ ಮರಳುಗಾರಿಕೆ : ಪೊಲೀಸರಿಗೆ , ಜನಪ್ರತಿನಿಧಿಗಳಿಗೆ ಕಮಿಷನ್ ಆರೋಪ…?


ರಾಯಚೂರು : ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ(illegal sand) ತಡೆಗಟ್ಟುವಲ್ಲಿ ಜಿಲ್ಲಾಡಳಿತ(district administration), ಪೊಲೀಸ್ ಇಲಾಖೆ(police deportment) ಸಂಪೂರ್ಣ ವಿಫಲವಾಗಿದೆ(failure). ಅಲ್ಲದೆ ಮರಳುಗಾರಿಕೆಯಲ್ಲಿ ಕಮಿಷನ್ ದಂಧೆ (Commission business) ಹೆಚ್ಚಾಗಿದೆ ಎಂದು ಕೆಆರ್‌ಎಸ್ ಪಕ್ಷದ(KRS party) ರಾಜ್ಯ ಯುವ ಘಟಕದ ಅಧ್ಯಕ್ಷ ನಿರುಪಾದಿ ಗೋಮರ್ಸಿ ಆರೋಪಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು(sinddhanur) ತಾಲ್ಲೂಕಿನಲ್ಲಿ ಎಥೆಚ್ಚವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಹೆಗ್ಗಿಲ್ಲದೆ ಹಗಲು ರಾತ್ರಿ(day & night) ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಪೊಲೀಸರು, ಶಾಸಕರು (MLA) ಮತ್ತು ಜನಪ್ರತಿನಿಧಿಗಳಿಗೆ ಕಮಿಷನ್ ಹೊಗುತ್ತದೆ ಎಂದು ಆರೋಪಿಸಲಾಗುತ್ತಿದೆ. ಸಿಂಧನೂರು ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿನ ತುಂಗಭದ್ರೆಯ (thungabhadra) ಒಡಲು ಅಗೆಯಲಾಗುತ್ತಿದೆ.

ನದಿಗೆ ನೇರವಾಗಿ ಜೆಸಿಬಿ(JCB), ಟಿಪ್ಪರ್(tipper), ಟ್ರ್ಯಾಕ್ಟರ್ (tractor) ಇಳಿಯುತ್ತಿವೆ. 24 ಗಂಟೆ ಮರಳು ಸಾಗಿಸುತ್ತಿದ್ದರು ಯಾರು ಕೇಳುವವರಿಲ್ಲ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದೆ (Collecting sand). ಇದರ ವಿರುದ್ಧ ದ್ವನಿ ಎತ್ತಿದವರ ದ್ವನಿ ಅಡಗಿಸಲಾಗುತ್ತಿದೆ. ಕೊಲೆ ಬೆದರಿಕೆ (Death threats) ಹಾಕಲಾಗುತ್ತದೆ, ಮನೆಗೆ ದಾಂಧಲೆ ಮಾಡಲಾಗುತ್ತದೆ. ಸರಕಾರದ ಮರಳು ನೀತಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಎಫ್ ಐ ಆರ್ (FIR) ದಾಖಲಾಗುತ್ತಿಲ್ಲ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯವ ಯುವ ಘಟಕದ ಅಧ್ಯಕ್ಷ ನಿರುಪಾದಿ ಆರೋಪಿಸಿದರು.


[ays_poll id=3]