This is the title of the web page
This is the title of the web page
National NewsVideo News

ಆ ಶಾಲೆಯಲ್ಲಿ ಪ್ಲೇಸ್ಕೂಲ್ ಫೀಸ್ ವರ್ಷಕ್ಕೆ 4.3 ಲಕ್ಷ ಅಂತೆ..!


K2kannadanews.in

Education business : ನಮ್ಮ ದೇಶದಲ್ಲಿ ಶಿಕ್ಷಣದ ಸ್ವರೂಪ ಬದಲಾಗಿದೆ. ಶಿಕ್ಷಣ ಅತೀ ದೊಡ್ಡ ಉದ್ಯಮ ಕ್ಷೇತ್ರವಾಗಿ ಬೆಳೆದಿದೆ. ಪಾಲಕರೊಬ್ಬರು ತಮ್ಮ ಮಗನಿಗೆ ಕಟ್ಟಿರುವ ಫೀಸ್ ರಶೀದಿ ಎಂದನ್ನು ಎಕ್ಸ್ ಕಥೆಯಲ್ಲಿ ಹಂಚಿಕೊಂಡಿದ್ದು ಪ್ಲೇ ಸ್ಕೂಲ್ (ಅಂಗನವಾಡಿ) ವಾರ್ಷಿಕ ಶುಲ್ಕ 4.3 ಲಕ್ಷ ಅಂತೆ..

ದೆಹಲಿಯ ವ್ಯಕ್ತಿಯೊಬ್ಬರು ತನ್ನ ಮಗನ ಪ್ಲೇ ಸ್ಕೂಲ್ ಫೀಸನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ವರ್ಷದ ಫೀಸ್ ಬರೋಬ್ಬರಿ 4.3 ಲಕ್ಷ ರೂಪಾಯಿ. ನನ್ನ ಸಂಪೂರ್ಣ ಶಿಕ್ಷಣಕ್ಕಿಂತ ದುಪ್ಪಟ್ಟು ಎಂದು ಹೇಳಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ. ವೃತ್ತಿಯಲ್ಲಿ ಚಾರ್ಟೆಂಡ್ ಅಕೌಂಟೆಂಟ್ ಆಗಿರುವ ಅಕಾಶ್ ಕುಮಾರ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ಲೇಸ್ಕೂಲ್ ಫೀಸ್ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅಕಾಶ್ ಕುಮಾರ್, ಈ ಮೊತ್ತ ನನ್ನ ಸಂಪೂರ್ಣ ಶಿಕ್ಷಣಕ್ಕಿಂತ ಹೆಚ್ಚಾಗಿದೆ. ಅಂತ ಪೊಸ್ಟ್ ಮಾಡಿದ್ದಾರೆ.

ಈ ಶಾಲೆಯಲ್ಲಿ ನನ್ನ ಮಗ ಉತ್ತಮವಾಗಿ ಆಡಲು ಕಲಿಯುತ್ತಾನೆ ಎಂದು ಭಾವಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದು, ಈ ಶಾಲಾ ಶುಲ್ಕ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಒಟ್ಟು ಮೊತ್ತ 4.3 ಲಕ್ಷ ರೂಪಾಯಿಯಲ್ಲಿ ರಿಜಿಸ್ಟ್ರೇಶನ್ ಫೀಸ್, ವಾರ್ಷಿಕ ಮೊತ್ತ ಎಂದು ಹಲವು ವರ್ಗೀಕರಣ ಮಾಡಲಾಗಿದೆ. 10 ಸಾವಿರ ರೂಪಾಯಿ ನಾನ್ ರಿಫಂಡೇಬಲ್ ರಿಜಿಸ್ಟ್ರೇಶನ್ ಮೊತ್ತವಾಗಿದೆ. ವಾರ್ಷಿಕ ಮೊತ್ತ 25,000 ರೂಪಾಯಿ. ಇನ್ನು ಎಪ್ರಿಲ್‌ನಿಂದ ಜೂನ್ ತಿಂಗಳ ವರೆಗಿನ ಶುಲ್ಕ 98,750 ರೂಪಾಯಿ. ಜುಲೈನಿಂದ ಸೆಪ್ಟೆಂಬರ್ ವರೆಗಿನ ಶುಲ್ಕ 98,750 ರೂಪಾಯಿ. ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ 98,750 ರೂಪಾಯಿ ಹಾಗೂ ಜನವರಿಯಿಂದ ಮಾರ್ಚ್ ವರೆಗೆ 98,750 ರೂಪಾಯಿ ಶುಲ್ಕ. ಒಟ್ಟು 4,30,000 ರೂಪಾಯಿ.


[ays_poll id=3]