
K2 ಕ್ರೈಂ ನ್ಯೂಸ್ : ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ಸಹಾಯ ಕೇಳಿ ಬಂದರೆ, ದೂರ ಓಡಿಸಿದ ಹೃದಯವಿದ್ರಾವಕ, ಸಮಾಜ ತಲೆತಗ್ಗಿಸುವಂತ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸೋಮವಾರ 12 ವರ್ಷದ ಬಾಲಕಿಯೊಬ್ಬಳು ಅರೆಬೆತ್ತಲೆಯಾಗಿ ಬೀದಿಯಲ್ಲಿ ಸಹಾಯಕ್ಕಾಗಿ ಓಡಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಕೆಗೆ ರಕ್ತಸ್ರಾವವಾಗುತ್ತಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗಿ ನಗರದ ದಂಡಿ ಆಶ್ರಮದ ಬಳಿ ಎಸೆದಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ, ಹುಡುಗಿ ವಸತಿ ಪ್ರದೇಶದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.
ಒಂದು ಚಿಂದಿ ಬಟ್ಟೆಯನ್ನು ಮೈಗೆ ಹೊದ್ದು ಆಕೆ ನಡೆಯುತ್ತಾ ಬರುತ್ತಿರುವುದು ವಿಡಿಯೊದಲ್ಲಿದೆ. ಹಾಗೆ ನಡೆದು ಬರುತ್ತಿರುವಾಗ ಮನೆಯೊಂದರ ಹೊರಗೆ ನಿಂತಿರುವ ಒಬ್ಬ ವ್ಯಕ್ತಿಯಲ್ಲಿ ಆಕೆ ಸಹಾಯ ಬೇಡುತ್ತಾಳೆ. ಆತ ಆಕೆಯಲ್ಲಿ ಹೋಗು ಹೋಗು ಎಂದು ಕೈಸನ್ನೆ ಮಾಡುತ್ತಿರುವುದು ವಿಡಿಯೊದಲ್ಲಿದೆ. ಆಕೆ ಸಹಾಯಕ್ಕೆ ಅಂಗಲಾಚುತ್ತಿದ್ದರೂ ಯಾರೂ ಆ ಬಾಲಕಿಗೆ ಸಹಾಯ ಮಾಡಲು ಮುಂದಾಗಲಿಲ್ಲ. ಇದು ಸಮಾಜದ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ.
![]() |
![]() |
![]() |
![]() |
![]() |
[ays_poll id=3]